Football match news and photo in AIFF website

Football match news
and photo in AIFF website


A group photograph of the "Karnataka State Veterans XI" and "Sports Journalists XI" teams has been carried on the AIFF website - www.the-aiff.com. The report and picture has also been sent to AFC and FIFA. Our match has caught world-wide attention.

Bangalore gets an Artificial Turf

The Karnataka State Football Association (KSFA) now boasts of an artificial turf. The turf, easily the envy of many a state across the country was inaugurated by Kushal Das, the General Secretary of the All India Football Federation in Bangalore.

Expressing his satisfaction, Das said, “The inauguration of the turf at KSFA is a great step forward for the development of the sport in the state as well as for holding both I-League and International Matches.”

“The laying of the turf, coupled with the completion of the Goal Project would give the AIFF the much-needed training centre with a ground.”

Karnataka Football Association president AR Khaleel added: “It is a historic day for us. But there’s still a lot of work to be done. The stadium will get a makeover and Bangalore will soon get a World Class Stadium with a capacity of 40,000.”

In the first match on artificial grass, the Karnataka State Veterans XI which included former stars Arumainayagam and Ulaganathan blanked the Sports Journalists XI 3-0.

The KSFA also honoured Olympians Ahmad Khan, Varadaraj and Asian Games medalists Ethiraj, Arumainayagam, Nataraj and Sampath on the occasion.
-www.the-aiff.com

AIFF WEBSITE LINK

http://www.the-aiff.com/pages/news/index.php?N_Id=2537

ಫುಟ್ಬಾಲ್ ತಂಡದ ಕೋಚ್ ನಂದಿನಿಗೆ ಅಭಿನಂದನೆ...!

ಕ್ರೀಡಾ ವರದಿಗಾರರ ತಂಡವು ಬೆಂಗಳೂರಿನಲ್ಲಿ ಕಳೆದ ಬುಧವಾರ ಫುಟ್ಬಾಲ್ ಪಂದ್ಯ ಆಡಿದ ಸಂದರ್ಭದಲ್ಲಿ ತಂಡದ ಕೋಚ್ ನಂದಿನಿ ಅವರಿಗೆ ಸ್ವ್ಯಾಬ್ ಅಧ್ಯಕ್ಷ ಶ್ರೀಕುಮಾರ್ ಅವರು ಅಭಿನಂದನೆ ಸಲ್ಲಿಸಿದ ಪರಿ.
-ಈ ಚಿತ್ರವನ್ನು ಕಳುಹಿಸಿ ಕೊಟ್ಟವರು ದೇವ್ ಸುಕುಮಾರ್

ಸ್ವ್ಯಾಬ್ ಸದಸ್ಯರಿಗೆ ಐಡಿ ಕಾರ್ಡ್



"ಸ್ವ್ಯಾಬ್" ಸದಸ್ಯರಿಗೆ ಮೊಟ್ಟ ಮೊದಲ ಬಾರಿಗೆ ನೀಡಲಾಗಿರುವ "ಐಡಿ ಕಾರ್ಡ್" ಹಾಗೂ "ಕಾರ್ಡ್ ಹೋಲ್ಡರ್ ಪೌಚ್". ಕಾರ್ಡ್ ಗಳನ್ನು ಸದಸ್ಯರು ನೀಡಿದ ವಾರ್ಷಿಕ ಶುಲ್ಕದಲ್ಲಿ ಮಾಡಿಸಲಾಗಿದ್ದು; ಕಾರ್ಡ್ ಹೋಲ್ಡರ್ ಪೌಚ್ ಗಳನ್ನು "ಯಾಮಿನಿ ಇ-ಮ್ಯಾಗಜೀನ್" ಸಹ ಸಂಪಾದಕರಾಗಿರುವ ಪ್ರೇಮಾ ಡೇವಿಡ್ ಅವರು "ಸ್ವ್ಯಾಬ್" ಸದಸ್ಯರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಇಪ್ಪತ್ತೆಂಟು ವರ್ಷಗಳ ಬಳಿಕ "ಬ್ಲೂ ಪಡೆ" ಗೆಲ್ಲಬಹುದೇ ವಿಶ್ವಕಪ್?

ಶಂಶೀರ್, ಬುಡೋಳಿ

19ರಿಂದ ಎಪ್ರಿಲ್ 2 ರವರೆಗೆ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳ ಅತಿಥೇಯತ್ವದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ಗಾಗಿ 15 ಮಂದಿ ಸದಸ್ಯರ ಭರತ ತಂಡವನ್ನು ಪ್ರಕಟಿಸಿದ ದಿನ. ಸಮತೋಲನ ರೀತಿಯಲ್ಲಿ ವಿಶ್ವಕಪ್ಗಾಗಿ ತಂಡವನ್ನು ಆಯ್ಕೆ ಮಾಡಿರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಯಶ್ಪಾಲ್ ಶರ್ಮಾ, ಸುರೇಂದ್ರ ಭವೆ, ನರೇಂದ್ರ ಹಿರ್ವಾನಿ ಹಾಗೂ ರಾಜಾ ವೆಂಕಟ್ ಸಮಿತಿಯು ಇಪ್ಪತ್ತೆಂಟು ವರ್ಷಗಳ ಬಳಿಕ ಭರತ ತಂಡ ವಿಶ್ವಕಪ್ ಗೆಲ್ಲಬೇಕೆಂಬ ನೆಲೆಯಲ್ಲಿ ತಂಡವನ್ನು ಪ್ರಕಟಿಸಿದಂತಿದೆ.

ಧೋನಿ ನೇತೃತ್ವದ ಭರತೀಯ ತಂಡ ಫೇವರೀಟ್ ತಂಡಗಳಲ್ಲೊಂದು ಎಂಬುದು ಸಂಶಯವಿಲ್ಲ. ಟೆಸ್ಟ್ ಅಗ್ರಸ್ಥಾನಿ ಹಾಗೂ ಏಕದಿನ ರ್ಯಾಂಕಿಂಗ್ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭರತ ಕ್ರಿಕೆಟ್ ತಂಡ 2011ರ ವಿಶ್ವಕಪ್ ಕ್ರಿಕೆಟ್ನಲ್ಲಿ ವಿಶ್ವಕಪ್ ಗೆಲ್ಲುವುದು ಅನಿವಾರ್ಯವೆಂದು ಗುರಿ ಇಟ್ಟುಕೊಂಡರೆ ಫೈನಲ್ ಹಾದಿಗೇರಬಹುದು. ತಂಡದ ಆಯ್ಕೆ ಸಮತೋಲನವಾಗಿದೆ. ಈ ಜೊತೆಗೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆಯೆಂಬುದು ಕೌತುಕವಾಗಿದೆ. ಯಾಕೆಂದರೆ ಇವರೆಗೆ ತವರಿನಲ್ಲಿ ನಡೆದ ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರತ, ಈ ಬಾರಿಯ ವಿಶ್ವಕಪ್, ತವರಿನಲ್ಲಿ ನಡೆಯುವುದರಿಂದ್ದ ವಿಶ್ವಕಪ್ ಜಯಿಸುವ ಫೇವರೀಟ್ ತಂಡಗಳಲ್ಲೊಂದಾಗಿದೆ. ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿರುವ ಭರತದ ಫೈನಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು. ಯಾಕೆಂದರೆ ಗ್ರೂಪ್ ಬಿಯಲ್ಲಿ ಭರತದ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳು ಸ್ಥಾನ ಪಡೆದಿವೆ.

ಈಗಾಗಲೇ ವಿಶ್ವಕಪ್ ಮುನ್ನ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ಇಂಡೀಸ್ ತಂಡಗಳ ವಿರುದ್ಧ ಸರಣಿಯಾಡಿರುವ ಭರತಕ್ಕೆ ಯಾವ ರೀತಿ ಈ ಎದುರಾಳಿ ತಂಡಗಳನ್ನು ಎದುರಿಸಬೇಕೆಂಬ ತಂತ್ರಗಾರಿಕೆ ಗೊತ್ತಿರಬಹುದು. ಸ್ಪಲ್ಪ ಮಟ್ಟಿಗೆ ದಕ್ಷಿಣ ಆಫ್ರಿಕಾ, ಇಂಡೀಸ್ ಹಾಗೂ ಇಂಗ್ಲೆಂಡ್ ತಂಡದ ವಿರುದ್ಧ ಪ್ರಬಲ ಸ್ಪಧರ್ೆ ಎದುರಿಸುವ ಸಾಧ್ಯತೆಯಿದೆ. ಹೀಗಾಗಿ ಧೋನಿ ಪಡೆ ಇದನ್ನು ಎದುರಿಸಲು ಸಿದ್ದತೆ ನಡೆಸಬೇಕು. ತವರಿನಲ್ಲಿ ನಡೆಯುವ ಪಂದ್ಯವೆಂದು ಅತೀ ಉತ್ಸಾಹ ತಂಡಕ್ಕೆ ಮಾರಕವಾಗಬಹುದು. ವಿಶ್ವದ ಜನತೆಯನ್ನು ತುದಿಗಾಲಲ್ಲಿ ನಿಲ್ಲಿಸಿರುವ ಈ ವಿಶ್ವಕಪ್ ಕ್ರಿಕೆಟ್ ಏಷ್ಯಾ ಖಂಡದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಭರತಕ್ಕೆ ಮತ್ತೊಮ್ಮೆ ಎರಡನೆ ಸಲ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಅಪೂರ್ವ ಅವಕಾಶ ಬಂದಿದೆ ಎನ್ನಬಹುದು. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಗೂ ವಿಶ್ವಕಪ್ ಗೆಲ್ಲುವ ತಂಡದ ಆಯ್ಕೆ ಮಾಡುವುದು ಬಹಳ ಸವಾಲಾಗಿಬಿಟ್ಟಿತ್ತಂತೆ. ಹಾಗಾದರೆ ಧೋನಿ ನಾಯಕತ್ವದ ತಂಡದ ಮೇಲೆ ಎಷ್ಟು ಒತ್ತಡ ಇರಲಿಕ್ಕಿಲ್ಲ? ಹಾಗೂ ಎಷ್ಟೊಂದು ನಿರೀಕ್ಷೆಗಳಿರಲಿಕ್ಕಿಲ್ಲ? ಏಷ್ಯಾ ಖಂಡದಲ್ಲಿ ನಡೆಯುವ ವಿಶ್ವಕಪ್ಅನ್ನು ಭರತ ಒಂದು ವೇಳೆ ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಶ್ರೀಲಂಕಾ , ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಗೆದ್ದರೆ ಸ್ಪಲ್ಪಮಟ್ಟಿಗೆ ತೃಪ್ತಿ ಪಡಬಹುದು. ಭದ್ರತಾ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ವಿಶ್ವಕಪ್ ಪಂದ್ಯ ನಡೆಸಲು ಹಿಂದೇಟು ಹಾಕಲಾಗಿದೆ.

ಕಪಿಲ್ ದೇವ್ ನಾಯಕತ್ವದ ತಂಡ , ಮಾಡಿದ ಸಾಧನೆ 2011ರಲ್ಲಿ ಧೋನಿ ಪಡೆ ಮಾಡಿದರೆ ಅದು ಧೋನಿ, ತನ್ನ ನಾಯಕತ್ವದಲ್ಲಿ ಮಾಡುವ ಅತಿ ದೊಡ್ಡ ಸಾಧನೆಯಾಗಲಿದೆ. ಹೀಗಾಗಿ ಧೋನಿ ನಾಯಕತ್ವದ ಮೇಲೆ ಆಯ್ಕೆ ಸಮಿತಿಯ ಜೊತೆಗೆ ದೇಶದ ಜನತೆಯೆ ಬಹಳ ನಿರೀಕ್ಷೆಯನ್ನಿಟ್ಟುಕೊಂಡಿದೆ. ಆರು ಬ್ಯಾಟ್ಸ್ಮನ್, ನಾಲ್ಕು ವೇಗದ ಬೌಲರ್ಗಳು, ಮೂರು ಸ್ಪಿನ್ನರ್ಗಳು, ಒಂದು ಆಲ್ರೌಂಡರ್ ಹಾಗೂ ಒಂದು ವಿಕೆಟ್ ಕೀಪರ್ಗಳನ್ನೊಳಗೊಂಡ ಭರತ ಕ್ರಿಕೆಟ್ ತಂಡಕ್ಕೆ ಒಂದು ವೇಳೆ ವಿಶ್ವಕಪ್ ಪಂದ್ಯದ ವೇಳೆ ಯಾರಾದರೂ ಗಾಯಾಗೊಂಡರೆ ಅದು ತಂಡಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಹೀಗಾಗಲೇ ಗಾಯಾಗೊಂಡಿರುವ ಸಚಿನ್ ತೆಂಡುಲ್ಕರ್, ಗೌತಮ್ ಗಾಂಭೀರ್, ಪ್ರವೀಣ್ ಕುಮಾರ್ ವಿಶ್ವಕಪ್ ಪಂದ್ಯದ ವೇಳೆ ಚೇತರಿಸಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ಒಂದು ವೇಳೆ ಇವರು ಫಿಟ್ನೆಸ್ ಮತ್ತು ಫಾಮರ್್ಅನ್ನು ಉತ್ತಮಪಡಿಸಲು ಸಾಧ್ಯವಾಗದಿದ್ದರೆ, ಆಯ್ಕೆ ಸಮಿತಿಯು ಬದಲಿ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಕೂಡಾ ಇರಬಹುದು. ಬಹಳ ನಿರೀಕ್ಷೆ ಮೂಡಿಸಿದ್ದ ಶಾಂತಕುಮಾರನ್ ಶ್ರೀಶಾಂತ್, ಪ್ರಗ್ಯಾನ್ ಓಝಾ, ರೋಹಿತ್ ಶಮರ್ಾ ಹಾಗೂ ಪಾಥರ್ಿವ್ ಪಟೇಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಮಾತ್ರವಲ್ಲ, ತಂಡದಲ್ಲಿ ಧೋನಿ ಜೊತೆಗೆ ಇತರ ವಿಕೆಟ್ ಕೀಪರ್ಗಳಾದ ಅಜೆಂಕ್ಯಾ ರಹಾನೆ, ಪಾರ್ಥೀವ್ ಪಟೇಲ್ರನ್ನು ಸೇರಿಸಿಕೊಳ್ಳುವ ಚರ್ಚೆ ನಡೆಯುತ್ತಿತ್ತು. ಆದರೆ ಕೊನೆಗೆ ಧೋನಿಯನ್ನು ತಂಡದ ಏಕೈಕ ವಿಕೆಟ್ ಕೀಪರ್ಆಗಿ ಉಳಿಸಿಕೊಳ್ಳಲಾಗಿದೆ. ಸಚಿನ್ ತೆಂಡುಲ್ಕರ್ಗೆ ಒಂದು ವೇಳೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹಾಗೂ ಜಾಕ್ ಕಾಲಿಸ್ಗೆ ಇದು ಕೊನೆಯ ವಿಶ್ವಕಪ್ ಎನ್ನಲಾಗುತ್ತಿದೆ. ಭರತ ತಂಡ ಮಾತ್ರ ಅಲ್ಲ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ಬದಲು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಝಿಲೆಂಡ್ ತಂಡಗಳು ಸಹ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ.

ಭರತದ ಬೌಲಿಂಗ್ ನೇತೃತ್ವ ವಹಿಸಿರುವ ಝಹೀರ್ ಖಾನ್ರ ಮೇಲೆ ಭರೀ ನಿರೀಕ್ಷೆಯಿಡಲಾಗಿದೆ. ಇವರ ಜೊತೆಗೆ ಆಶೀಶ್ ನೆಹ್ರಾ, ಮುನಾಫ್ ಪಟೇಲ್, ರವಿಚಂದ್ರನ್ ಅಶ್ವಿನ್ ಸಾಥ್ ನೀಡಲಿದ್ದಾರೆ. ಸ್ಪಿನ್ ವಿಭಗದ ಹರ್ಭಜನ್ ಸಿಂಗ್ರ ಜೊತೆಗೆ ಪಿಯೂಸ್ ಚಾವ್ಲಾ ಕೂಡಾ ಯಾವ ರೀತಿಯ ಪ್ರದರ್ಶನ ನೀಡಬಲ್ಲುರು ಎಂಬುದು ಕೌತುಕವಾಗಿದೆ. ಹದಿನೈದು ಮಂದಿಯಲ್ಲಿ ಯಾರನ್ನು ಆಡುವ ಬಳಗದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬುದರ ಮೇಲೆ ಕೂಡಾ ಬಹಳ ನಿರೀಕ್ಷೆಯಿಡಲಾಗಿದೆ. ತಂಡದ ಆಯ್ಕೆ ಸಮರ್ಥವಾಗಿದೆಯೊ ಅಥವಾ ಆಗಿಲ್ಲವೆಂಬುದು ಮುಖ್ಯವಲ್ಲ. ಬದಲು ಆಯ್ಕೆಗೊಂಡಿರುವ ಆಟಗಾರರು ವಿಶ್ವಕಪ್ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಮುಖ್ಯ ಇದರ ಮೇಲೆ ತಂಡದ ಭವಿಷ್ಯ ನಿಂತಿದೆ. ಎಲ್ಲಾ ಆಟಗಾರರು ಸಮರ್ಥರೆ. ಹೀಗಾಗಿ ಆಟಗಾರರ ಆಟದ ಸಾಮಥ್ರ್ಯದ ಬಗ್ಗೆ ಚರ್ಚೆ ಮಾಡುವುದು ಒಳಿತಲ್ಲ.

ಚೊಚ್ಚಲ ವಿಶ್ವಕಪ್ಗೆ ಆಯ್ಕೆಗೊಂಡಿರುವ ಆರ್.ಅಶ್ವಿನ್ ಹಾಗೂ ಪಿಯೂಸ್ ಚಾವ್ಲಾರಿಗೆ ಆಡುವ ಅವಕಾಶ ನೀಡಿದರೆ ಇದನ್ನು ಇವರು ಸಮರ್ಥವಾಗಿ ಬಳಸಿಕೊಂಡರೆ ಇದು ಇವರಿಬ್ಬರ ಮುಂದಿನ ಭವಿಷ್ಯವನ್ನು ನಿರ್ಧರಿಸಬಲ್ಲುದು. ಬಾಯಿಗೆ ಬಂದ ತುತ್ತನ್ನು ಕಳೆದುಕೊಳ್ಳಬಾರದು ಎಂಬ ಮಾತು ಈ ಆಟಗಾರರಿಗೆ ಹಾಗೂ ಭರತ ತಂಡಕ್ಕೆ ಅನ್ವಯಿಸುತ್ತದೆ. 1983ರ ವಿಶ್ವಕಪ್ ಗೆದ್ದ ಸಂಭ್ರಮವನ್ನೇ ಈಗಲೂ ಸವಿಯುತ್ತಿರುವ ಭರತೀಯರಿಗೆ ಈಗ ಹೊಸ ವಿಶ್ವಕಪ್ ಗೆದ್ದ ಸವಿ ಸವಿಯುವ ಆಶೆ ಮೂಡಿದೆ. ಹೀಗಾಗಿ ಧೋನಿ ನೇತೃತ್ವದ ತಂಡ ಫೈನಲ್ ಗಾದಿ ಏರುವವರೆಗೆ ಪ್ರಬಲ ಹಾಗೂ ಸಾಮಾನ್ಯ ಸ್ಪಧರ್ೆಯನ್ನು ಸಮರ್ಥವಾಗಿ ನಿಭಯಿಸಬೇಕು. ಒಂದು ದೃಷ್ಟಿಯಲ್ಲಿ ನೋಡುವುದಾದರೆ ಭರತಕ್ಕೆ ವಿಶ್ವಕಪ್ ಗೆಲ್ಲುವುದು ಕಷ್ಟದ ಸಂಗತಿಯೇನಲ್ಲ.

ಸಮರ್ಥ ಆಟಗಾರರು ಇದ್ದ ಮೇಲೆ ಭರತ ಏನೂ ಚಿಂತೆ ಮಾಡಬೇಕಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಹಾಗೂ ತೃತೀಯ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮಥರ್ಿಸಿಕೊಂಡಿರುವ ಸ್ಫೋಟಕ ಬ್ಯಾಟ್ಸ್ಮನ್ ಯೂಸುಫ್ ಪಠಾಣ್ ಮೇಲೆ ಹಾಗೂ ಯುವರಾಜ್ ಸಿಂಗ್, ಮುನಾಫ್ ಪಟೇಲ್, ಝಹೀರ್ ಖಾನ್, ನೆಹ್ರಾ ಹಾಗೂ ಐಪಿಎಲ್ನ ದುಬಾರಿ ಆಟಗಾರ ಗೌತಮ್ ಗಾಂಭೀರ್ ಮೇಲೆ ಭರೀ ನಿರೀಕ್ಷೆಯಿಡಲಾಗಿದೆ. ಒಂದು ವೇಳೆ ವಿಶ್ವಕಪ್ ಗೆಲ್ಲುವುದಕ್ಕಿಂತ ಮುಂಚೆ ತಂಡದ ಪ್ರದರ್ಶನ ಬಹಳ ಮುಖ್ಯವಾಗುತ್ತದೆ. ವಿವಿಧ ದೇಶಗಳ ಕ್ರಿಕೆಟ್ ತಂಡಗಳು ಭಗವಹಿಸುತ್ತಿರುವುದರಿಂದ್ದ ಟೀಮ್ ಇಂಡಿಯಾ ವಿಶ್ವಕಪ್ ಪಂದ್ಯದಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಬೇಕು. ಹೀಗಾದಲ್ಲಿ ಮಾತ್ರ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಬಹುದು. ಆರಂಭಿಕ ಬ್ಯಾಟ್ಸ್ಮನ್ಗಳ ವಿಕೆಟ್ ಬೇಗನೆ ಪತನಗೊಂಡರೆ ಮತ್ತೆ ತಂಡದ ಬಲ ಹೀನವಾದಂತೆ ಇತರ ಆಟಗಾರರ ವಿಕೆಟ್ ಉರುಳುವುದು ಬ್ಲೂ ತಂಡದ ಒಂದು ಮೈನಸ್ ಪಾಯಿಂಟ್. ಇದು ವಿಶ್ವಕಪ್ನಲ್ಲಿ ಪುನರಾವರ್ತನೆಯಾಗಬಾರದು. ವಿಶ್ವಕಪ್ ಪಂದ್ಯದ ಸಮಯದಲ್ಲಿ ಜಯವೊಂದೆ ತಮ್ಮ ಗುರಿ ಎಂಬ ಭವನೆ ಟೀಮ್ ಇಂಡಿಯಾದಲ್ಲಿದ್ದರೆ ಧೋನಿ ಪಡೆಗೆ ಯಾವ ತಂಡಗಳು ಪ್ರಬಲವಾಗಿ ತೋರಲಾರವು. ಏನೇ ಚಚರ್ೆಗಳಿದ್ದರೂ, ಯಾರು, ಯಾವಾಗ ಸೋಲುತ್ತಾರೆ, ಗೆಲ್ಲುತ್ತಾರೆ ಎಂಬುದಕ್ಕೆ ವಿಶ್ವಕಪ್ ಆರಂಭವಾಗುವವರೆಗೆ ಕಾಯಬೇಕು. ಧೋನಿ ಪಡೆಯಂತೂ ವಿಶ್ವಕಪ್ ಗೆಲ್ಲುವ ಗುರಿಯಲ್ಲಿದೆ. ಗುಡ್ಲಕ್ ಟೀಮ್ ಇಂಡಿಯಾ.

chammu99@gmail.

"ಸಿಟಿಜನ್ ಜರ್ನಲಿಸ್ಟ್" ...ಎಂ. ಎ. ಪೊನ್ನಪ್ಪ ಭಾಷಣ

ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ "ಪ್ರಜಾವಾಣಿ" ಕ್ರೀಡಾ ಸಂಪಾದಕರಾದ ಶ್ರೀ ಎಂ.ಎ. ಪೊನ್ನಪ್ಪ ಅವರು ಜನವರಿ 21, 2011 (ಶುಕ್ರವಾರ) ರಂದು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ ಸಭಾಭವನದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ ಸಹಯೋಗದಲ್ಲಿ ನಡೆದ "ಸಿಟಿಜನ್ ಜರ್ನಲಿಸಮ್ ಪ್ರೋಗ್ರಾಮ್" ಕಾರ್ಯಕ್ರಮದಲ್ಲಿ ಭಾಷಣ ನೀಡಿದರು. ಅದರ ಪೂರ್ಣ ಪಾಠವನ್ನು ಇಲ್ಲಿ ಕ್ರೀಡಾ ಪತ್ರಕರ್ತ ಮಿತ್ರರ ಓದಿಗಾಗಿ ಪ್ರಕಟಿಸಲಾಗಿದೆ.


"ಸಿಟಿಜನ್ ಜರ್ನಲಿಸ್ಟ್"

ಭಾಷಣ: ಎಂ. ಎ. ಪೊನ್ನಪ್ಪ

"ಸಿಟಿಜನ್ ಜರ್ನಲಿಸ್ಟ್" ಇದು ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮಕ್ಕೆ ಹೊಸ ಆಯಾಮ ನೀಡಿದ ಹೊಸದೊಂದು ಪರಿಕಲ್ಪನೆ. ಇಂಥದೊಂದು ಹೊಸಪರಿಕಲ್ಪನೆಯ ಕುರಿತು ಪರಿಪೂರ್ಣವಾದ ಮಾಹಿತಿಯನ್ನು ಕಲ್ಪಿಸಿಕೊಡುವ ಉದ್ದೇಶದ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ತಮಗೆಲ್ಲ ನಮಸ್ಕಾರ.

"ಸಿಟಿಜನ್ ಜರ್ನಲಿಸ್ಟ್" ಎನ್ನುವ ಪದವೇ "ನಿಮ್ಮೊಳಗೂ ಒಬ್ಬ ಪತ್ರಕರ್ತನಿದ್ದಾನೆ" ಎಂದು ಪ್ರತಿಯೊಬ್ಬರಿಗೂ ತಿಲಿಸುವಂಥ ವಿಶೇಷವಾದ ಒಳ ಅರ್ಥವನ್ನು ಹೊಂದಿದೆ. ಎಲ್ಲರೂ ಪತ್ರಕರ್ತರಾಗಬಹುದು. ಆದರೆ ಪರಿಣತಿಯ ಅಂತರ ಇರಬಹುದು. ವೃತ್ತಿಪರ ಹಾಗೂ ನಾಗರಿಕ ಪತ್ರಕರ್ತರ ನಡುವೆ ಇರುವ ಅಂತರ ಮಾತ್ರ ಇಷ್ಟೇ ಆಗಿರುತ್ತದೆ. ಆದರೆ ನಾಗರಿಕ ಪತ್ರಕರ್ತರೂ ವೃತ್ತಿಪರರಂತೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಲು ಖಂಡಿತ ಸಾಧ್ಯ ಅಂಥದೊಂದು ಸಾಧ್ಯತೆಗೆ ಅವಕಾಶ ಮಾಸಿಕೊತ್ತಿದ್ದೆ "ಸಿಟಿಜನ್ ಜರ್ನಲಿಸಂ" ಅಥವಾ "ಸಿಟಿಜನ್ ಜರ್ನಲಿಸ್ಟ್" ಎನ್ನುವ ಪರಿಕಲ್ಪನೆ.

"ಸಿಟಿಜನ್ ಜರ್ನಲಿಸ್ಟ್" ಎನ್ನುವ ಕಲ್ಪನೆ ಭಾರತೀಯ ಮಾಧ್ಯಮಕ್ಕೆ ಪರಿಚಯವಾಗಿ, ಅದರಲ್ಲಿ ಜನರೂ ತೊಡಗಿಕೊಂಡಿದ್ದು ಕಳೆದ ಒಂದೆರಡು ವರ್ಷಗಳಲ್ಲಿ. ಹೀಗಾಗುವುದಕ್ಕೆ ಕಾರಣ ದೃಶ್ಯಮಾಧ್ಯಮಗಳು ಹೆಚ್ಚು ಕ್ರಿಯಾಶೀಲವಾಗಿದ್ದು. ಆದರೆ ಆರ್ಥರ್ ಸಿ ಕ್ಲಾರ್ಕ್ ಹೇಳುವಂತೆ ಹ್ಯಾಮ್ ರೇಡಿಯೋ ಬಳಕೆದಾರ, ಅಂತರಜಾಲದಲ್ಲಿ ಅಭಿಪ್ರಾಯ ಹರಿಬಿಡುವ ಬ್ಲಾಗರ್, ಹಾಗೂ ಇಂದಿನ ಸಮೂಹ ಮಾಧ್ಯಮದ ಜೊತೆ ತಂತ್ರಜ್ಞಾನದ ಅರಿವಿನೊಂದಿಗೆ ಸಂಪರ್ಕ ಹೊಂದುವ ಪ್ರತಿಯೊಬ್ಬನೂ ಸಿಟಿಜನ್ ಜರ್ನಲಿಸ್ಟ್.

ಬ್ಲಾಗರ್, ಮೊಬೈಲ್ ಬಳಕೆದಾರ ಒಂದು ಘಟನೆಯನ್ನು ದಾಖಲಿಸಿ ಅದಕ್ಕೆ ಪ್ರತಿಯಾಗಿ ಅಭಿಪ್ರಾಯಗಳು ಹುಟ್ಟುವಂತೆ ಮಾಡಬಲ್ಲವನಾಗಿದ್ದಾನೆ ಎನ್ನುತ್ತಾರೆ
ಆರ್ಥರ್ ಸಿ ಕ್ಲಾರ್ಕ್. ಇತ್ತೀಚೆಗೆ ನಿಧನರಾದ ಆರ್ಥರ್ ಸಿ ಕ್ಲಾರ್ಕ್ ಖ್ಯಾತ ಲೇಖಕ, ಕಾದಂಬರಿಕಾರ. ಇವರು ಬರೆದ ವಿಜ್ಞಾನದ ಕಥೆಗಳು ಕೇವಲ ಕಲ್ಪನೆಯಷ್ಟೇ ಆಗದೆ ಅವರ ಕಣ್ಣಮುಂದೆ ಸಾಕಾರವಾದಂಥವು.

ಸಂಪರ್ಕ ಹಾಗೂ ಸಮೂಹ ಮಾಧ್ಯಮ ಕ್ಷೇತ್ರ ಕುರಿತು ಒಬ್ಬ ವಿಜ್ಞಾನಿಗಿಂತ ಹೆಚ್ಚಾಗಿ ಕನಸು ಕಂಡವರು
ಆರ್ಥರ್ ಸಿ ಕ್ಲಾರ್ಕ್. ಅದು ಸಾಕಾರವಾಗಿದ್ದನ್ನು ಕಣ್ಣಾರೆ ಕಂಡವರು. ಮಾಧ್ಯಮ ಕ್ಷೇತ್ರದ ಏಳುಬೀಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಆರ್ಥರ್ ಸಿ ಕ್ಲಾರ್ಕ್ ನಾಲ್ಕು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ಸಿಟಿಜನ್ ಜರ್ನಲಿಸ್ಟ್ ಕುರಿತು ಸುದೀರ್ಘ ಲೇಖನವನ್ನು ಬರೆದಿದ್ದರು. ಆ ಲೇಖನವು ಸಿಟಿಜನ್ ಜರ್ನಲಿಸ್ಟ್ ಎಂದರೇನು ಎನ್ನುವುದನ್ನು ತಿಳಿಸುತ್ತದೆ.

2004ರಲ್ಲಿ ಏಷ್ಯಾದಲ್ಲಿ ಆದ ಸುನಾಮಿ ವಿಶ್ವವನ್ನೇ ನಡುಗಿಸಿತು ಎಂದೇ ಬಣ್ಣಿಸಲಾಯಿತು. ಈ ಘಟನೆ ನಡೆದ ಸ್ಥಳಕ್ಕೆ ಸ್ವಲ್ಪ ಹತ್ತಿರದಲ್ಲೇ- ಶ್ರೀಲಂಕಾದಲ್ಲಿ- ನೆಲೆಸಿದ್ದ
ಕೆಲವರು ಮಹತ್ವದ ಘಟನೆಗೆ ಸಾಕ್ಷಿಯಾದರು. ರಜೆ ದಿನದ ಸಂಭ್ರಮದಲ್ಲಿದ್ದ ನೂರಾರು ಮಂದಿ ಭೀಕರ ಸುನಾಮಿ ಅಲೆಗಳ ದೃಶ್ಯಗಳನ್ನು ತಮ್ಮ ಹ್ಯಾಂಡಿಕ್ಯಾಮ್‌ನಲ್ಲಿ ಸೆರೆಹಿಡಿದರು. ಅಲ್ಲಿದ್ದವರೆಲ್ಲಾ ದುರದೃಷ್ಟವಶಾತ್ ಒಂದು ಕೆಟ್ಟ ಗಳಿಗೆಯಲ್ಲಿ ಕೆಟ್ಟ ಸ್ಥಳದಲ್ಲಿದ್ದರು. ಆದರೂ ಅವರು ತಮ್ಮ ಕ್ಯಾಮೆರಾ ಎಚ್ಚರವಾಗಿಟ್ಟಿದ್ದರು. ಟಿವಿ ಚಾನೆಲ್‌ನವರು, ವರದಿಗಾರರು ಬರುವ ಹೊತ್ತಿಗೆ ತಡವಾಗಿತ್ತು. ಅವರು ಭೀಕರ ಅಲೆಗಳನ್ನು ಪ್ರತ್ಯಕ್ಷ ಕಂಡು ಸೆರೆಹಿಡಿದವರಿಂದ ಬೇಡಿ ಪಡೆದು ತಮ್ಮ ಟಿವಿಗಳಲ್ಲಿ ಪ್ರಸಾರ ಮಾಡಬೇಕಾಯಿತು. ಈ ಒಂದು ಘಟನೆ ಸಿಟಿಜನ್ ಜರ್ನಲಿಸ್ಟ್ ಮಹತ್ವ ಏನೆಂದು ಸ್ಪಷ್ಟವಾಗಿ ವಿವರಿಸುತ್ತದೆ.

ಸಂವಹನಕ್ಕೆ ತೀವ್ರವಾಗಿ ತುಡಿಯುವ ಪ್ರಭೇದ ನಮ್ಮದು. ಅದೂ ತಾಂತ್ರಿಕವಾಗಿ ಸಾಧ್ಯವಾಗುವುದಾದರೆ ಮತ್ತಷ್ಟು ಬೇಗ ಅದನ್ನು ಸ್ವೀಕರಿಸುತ್ತೇವೆ, ನಮ್ಮದನ್ನಾಗಿಸಿಕೊಳ್ಳುತ್ತೇವೆ. ಆರ್ಥಿಕ, ಕಾನೂನು ಮತ್ತು ರಾಜಕೀಯಗಳಷ್ಟೇ ಇದಕ್ಕೆ ಮಿತಿಗಳಾಗಬಹುದು. ಕಾಲಾನಂತರದಲ್ಲಿ ಅವೂ ಕೂಡ ತೊಡಕಾಗುವುದಿಲ್ಲ. ಆದರೆ ನಮ್ಮ ನೈತಿಕತೆ ಮಾತ್ರ ನಮ್ಮ ಮುಂದೆ ಇದ್ದೇ ಇರುತ್ತದೆ. ಭವಿಷ್ಯದ ಸಂಪೂರ್ಣ ಸಂಪರ್ಕವುಳ್ಳ ಜಗತ್ತನ್ನು ರೂಪಿಸುವುದು ನಮ್ಮ ಕೈಗಳಲ್ಲೇ ಇದೆ ಎನ್ನುವುದನ್ನು ಮಾತ್ರ ಸಿಟಿಜನ್ ಜರ್ನಲಿಸ್ಟ್ ಮರೆಯಬಾರದು.

ನಾವೀಗ ಇರುವುದು ಮಾಧ್ಯಮ ಜಗತ್ತಿನಲ್ಲಿ. ಜಗತ್ತಿನ ಎಲ್ಲ ಪತ್ರಿಕೆಗಳು, ಸುದ್ದಿ ರವಾನಿಸುವ ಅಲೆಗಳು ಸ್ತಬ್ಧವಾಗಿಬಿಟ್ಟರೆ, ನಮ್ಮ ಜಗತ್ತು ಕೂಡ ಸ್ತಬ್ಧ. ಹಾಗಾಗಿ ಸಶಕ್ತ ಸಮಾಜಕ್ಕೆ ಸದಾ ಮಾಹಿತಿ ನೀಡಲು ವಿವಿಧ ರೀತಿಯ ಮಾಧ್ಯಮಗಳು ಬೇಕು. ಅಮೆರಿಕದ ಲೇಖಕ ಎ.ಜೆ. ಲೀಬ್ಲಿಂಗ್ ಹೇಳುತ್ತಾನೆ, ‘ಪತ್ರಿಕಾ ಸ್ವಾತಂತ್ರ್ಯ ಅನ್ನೋದು ಪತ್ರಿಕೆಯನ್ನು ಹೊಂದಿರುವವರದ್ದಾಗಿರುತ್ತದೆ’ ಎಂದು. ಈ ಮಾತಿನಲ್ಲಿ ಅರ್ಥವಿದೆ.

ಇತ್ತೀಚಿನವರೆಗೆ ಇದ್ದ ಪರಿಸ್ಥಿತಿ ಇದು. ಆದರೆ ಅಂತರ್ಜಾಲ ಈಗ ಪ್ರತಿಯೊಬ್ಬರ ಕಂಪ್ಯೂಟರನ್ನು ಒಂದು ಪ್ರಿಂಟಿಂಗ್ ಪ್ರೆಸ್, ಪ್ರಸಾರಕೇಂದ್ರವನ್ನಾಗಿ ಮಾಡಿದೆ. ನಾವೀಗ ಸಂಪರ್ಕ ಮಾಧ್ಯಮದ ಎರಡನೇ ಯುಗಕ್ಕೆ ಕಾಲಿಡುತ್ತಿದ್ದೇವೆ. ಬ್ಲಾಗ್‌ಗಳು, ವಿಕಿಪೀಡಿಯಾ ಮತ್ತು ಸಿಟಿಜನ್ ಜರ್ನಲಿಸ್ಟ್‌ಗಳು ಮುಂಬರುವ ಹೊಸತನದ ಸಂಕೇತಗಳು.

ಬ್ಲಾಗ್ ಬರಹಗಾರರು ಆನ್‌ಲೈನ್‌ನಲ್ಲಿ ತಮ್ಮ ಡೈರಿ ಬರೆಯುವ ಮೂಲಕ ತಮ್ಮ ವೃತ್ತಿ ಮತ್ತು ಸಮಾಜಿಕ ಪರಿಧಿಯಿಂದಾಚೆಗೂ ಪ್ರಭಾವಿಯಾಗಬಲ್ಲರು. ಕೊಲಂಬಿಯಾ ಬಾಹ್ಯಾಕಾಶ ನೌಕೆ ದುರಂತಕ್ಕೀಡಾದಾಗ ಅಸಂಬದ್ಧ ಪತ್ರಿಕಾ ವರದಿಗಳನ್ನು ಖಂಡತುಂಡವಾಗಿ ಟೀಕಿಸಿದ್ದು ಬಾಹ್ಯಾಕಾಶದ ಬಗ್ಗೆ ತಿಳಿದಿದ್ದ ಅನುಭವಿ ಬ್ಲಾಗ್ ಬರಹಗಾರರು ಎನ್ನುವುದನ್ನು ಮರೆಯುವಂತಿಲ್ಲ.

ಸಿಟಿಜನ್ ಜರ್ನಲಿಸಂ ಅನ್ನೋ ಪರಿಕಲ್ಪನೆಯನ್ನು ಶೇನ್ ಬೌಮನ್ ಮತ್ತು ಕ್ರಿಸ್ ವಿಲ್ಲೀಸ್ ಹೀಗೆ ವ್ಯಾಖ್ಯಾನಿಸುತ್ತಾರೆ: ‘ಮಾಹಿತಿ ಸಂಗ್ರಹಿಸುವ, ವರದಿ ಮಾಡುವ, ವಿಶ್ಲೇಷಿಸುವ ಮತ್ತು ಸುದ್ದಿ, ಮಾಹಿತಿಯ ಪ್ರಸಾರದಲ್ಲಿ ಕ್ರಿಯಾಶೀಲ ತೊಡಗುವಿಕೆ’ ಎಂದು.

ಸಿಟಿಜನ್ ಜರ್ನಲಿಸಂ ಉದ್ದೇಶ ಪ್ರಜಾಪ್ರಭುತ್ವ ನಿರೀಕ್ಷಿಸುವಂತೆ ಸ್ವತಂತ್ರ, ವಿಶ್ವಾಸಾರ್ಹ, ನಿಖರ, ಸವಿವರ, ಸಾಂದರ್ಭಿಕ ಮಾಹಿತಿಯನ್ನು ಪೂರೈಸುವುದು. ಇದನ್ನು ನಾವು ಮಾಧ್ಯಮದ ಮುಖ್ಯವಾಹಿನಿಯಿಂದಲೂ ನಿರೀಕ್ಷಿಸುತ್ತೇವೆ. ಸಿಬಿಎಸ್‌ ನ್ಯೂಸ್‌ನಲ್ಲಿ ನಿರೂಪಕನಾಗಿರುವ ವಾಲ್ಟರ್ ಕ್ರಾನ್‌ಕೈಟ್ ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಮಾಧ್ಯಮ ಒತ್ತಡವನ್ನು ಎದುರಿಸುತ್ತಿದೆ. ಇಂದು ಸಂಪಾದಕೀಯ ಬಳಗದ ಏಕತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ಕಾರ್ಪೋರೇಟ್ ಸೆನ್ಸಾರ್ ಸರ್ಕಾರಿ ಸೆನ್ಸಾರ್ ನಷ್ಟೇ ಅಪಾಯಕಾರಿ. ಹಾಗೆ ಸ್ವಯಂ ಹೇರಿಕೆಯ ಸೆನ್ಸಾರ್ ವಂಚನೆ ಎನ್ನುತ್ತಾನೆ ಮಾಧ್ಯಮ ನಿರೂಪಕ ಕ್ರಾನ್‌ ಕೈಟ್.

ಸಿಟಿಜನ್ ಜರ್ನಲಿಸ್ಟ್‌ಗಳು ಪೂರ್ವಾಗ್ರಹ ಪೀಡಿತರಾಗಿರುವುದಿಲ್ಲ ಎನ್ನುವ ಹಾಗಿಲ್ಲ. ಆದರೆ ಅಸಂಖ್ಯ ಮಂದಿ ಏಕಕಾಲಕ್ಕೆ ಭಾಗಿಯಾಗಿರುವ ವಿಕಿಪೀಡಿಯಾ ಸ್ವಯಂ ತಿದ್ದಿಕೊಳ್ಳುವುದಕ್ಕೆ ಸಾಧ್ಯವಿರುವುದನ್ನು ಸಾಬೀತು ಮಾಡಿದೆ. ಆರಂಭದಲ್ಲಿ ವಿಕಿಪೀಡಿಯಾ "ಆನ್ ಎನ್‌ ಸೈಕ್ಲೋಪಿಡೀಯಾ"ವನ್ನು ಇಂಟರ್ನೆಟ್ ಬಳಕೆದಾರರ ಮಾಹಿತಿಯಿಂದಲೇ ರೂಪಿಸಲಾಯಿತು. ಇದು ಅರೆಸತ್ಯ, ಸುಳ್ಳು ಮಾಹಿತಿಗಳನ್ನು ಹೊಂದಿರುವ ಭಯವಿತ್ತು. ಆದರೆ ಅಧ್ಯಯನಗಳು ಹೇಳುತ್ತವೆ, ಅಂಥ ಯಾವುದೇ ಮಾಹಿತಿಯೂ ಅತಿ ಶೀಘ್ರದಲ್ಲೇ ತಿದ್ದುಪಡಿಯಾಗುತ್ತದೆ ಮತ್ತು ಅಪ್‌-ಡೇಟ್ ಕೂಡ ಆಗುತ್ತದೆ!

ಹಾಗಂತ ಸಿಟಿಜನ್ ಜರ್ನಲಿಸ್ಟ್ ಕಠಿಣವಾದ ಮಾಧ್ಯಮ ಸ್ಪರ್ಧೆಯಲ್ಲಿ ಬದುಕುತ್ತಾನಾ? ಈ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಹೊಸ ಬದಲಾವಣೆ ಮಾಧ್ಯಮದ ಬಳಕೆದಾರನ ಶಕ್ತಿಯನ್ನು ಉಪೇಕ್ಷಿಸುವಂತಿಲ್ಲ.

ಸಿಟಿಜನ್ ಜರ್ನಲಿಸಮ್‌ಗೆ ಇದೊಂದು ಉತ್ತಮ ಉದಾಹರಣೆ: ಕಮರ್ಷಿಯಲ್ ದೃಷ್ಟಿಯಲ್ಲೂ ಯಶಸ್ಸು ಕಂಡ ಮತ್ತು ಉತ್ತಮ ಸಿಟಿಜನ್ ಜರ್ನಲಿಸಂ ಎಂದು ಗುರುತಿಸಿಕೊಂಡಿದ್ದು ದಕ್ಷಿಣ ಕೊರಿಯಾದ www.ohmynews.com; 2001 ರಲ್ಲಿ "ಓಹ್ ಯೊನ್ ಹೊ" ಎಂಬ ಪತ್ರಕರ್ತ ಅಂತರ್ಜಾಲ ಪತ್ರಿಕೆ ಆರಂಭಿಸಿದ. ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತ ಎಂಬುದು ಆತನ ನಿಲುವು.

ಹಾಗಾಗಿ ಆತ ಯಾರು ಬೇಕಾದರೂ ವರದಿ ಮಾಡಬಹುದು ಎಂಬ ಆಹ್ವಾನ ಕೊಟ್ಟ. ಇಂದು ಸಾವಿರಾರು ಮಂದಿ ಈ ವೆಬ್‌ಸೈಟಿಗೆ ಸುದ್ದಿ ಬರೆದು ಕಳಿಸುತ್ತಾರೆ. ಪ್ರತಿದಿನ 7.5 ಲಕ್ಷ ಮಂದಿ ಈ ವೆಬ್‌ಸೈಟಿಗೆ ಭೇಟಿಕೊಡುತ್ತಾರೆ. ಈಗ ಓಹ್‌ಮೈನ್ಯೂಸ್ ವೆಬ್‌ಸೈಟಿನಲ್ಲಿ ಕೇವಲ ೪೦ ಮಂದಿ ಸಿಬ್ಬಂದಿ ಇದ್ದು, ಅವರು ಬರೆಯುವ ಸುದ್ದಿ ವೆಬ್‌ಸೈಟಿನಲ್ಲಿ ಪ್ರಕಟವಾದ ಸುದ್ದಿಗಳ ಐದನೇ ಒಂದು ಭಾಗ ಮಾತ್ರ! ಉಳಿದಿದ್ದು ನಾಗರಿಕರು ಕಳಿಸಿದ್ದು.

ದಕ್ಷಿಣ ಕೊರಿಯ ಅಧ್ಯಕ್ಷ ರೊಹ್ ಮೂ ಹ್ಯೂನ್ ಆಯ್ಕೆಯಲ್ಲಿ ಈ ವೆಬ್‌ಸೈಟ್ ಮಹತ್ವದ ಪಾತ್ರ ವಹಿಸಿತ್ತು. ಚುನಾವಣೆ ನಂತರ ಹ್ಯೂನ್ ಮೊದಲು ಸಂದರ್ಶನ ನೀಡಿದ್ದು ಯಾವುದೇ ಪತ್ರಿಕೆಗಲ್ಲ. ಸಿಟಿಜನ್ ಜರ್ನಲಿಸ್ಟ್‌ಗಳಿಂದ ನಡೆಯುತ್ತಿರುವ "ಓಹ್ ಮೈನ್ಯೂಸ್ ವೆಬ್‌ಸೈಟಿಗೆ! ಇದೇ ವ್ಯಕ್ತಿ ಆರೋಪ ಹೊತ್ತು ನಿಂತಾಗ ನಡೆದ ಪ್ರತಿಭಟನೆಗಳನ್ನು ವಿಸ್ತೃತವಾಗಿ, ಸಚಿತ್ರ ಹಾಗೂ ವಿಡಿಯೋಗಳೊಂದಿಗೆ ವರದಿ ಮಾಡಿದ ಹೆಗ್ಗಳಿಕೆ ಸಿಟಿಜನ್ ಜರ್ನಲಿಸ್ಟ್‌ಗಳದ್ದು.

ನಿಷ್ಕ್ರಿಯವಾದ ಮಾಧ್ಯಮದ ಯುಗ ಅಂತ್ಯದತ್ತ ಸಾಗುತ್ತಿದೆ. ಸಿಜಿಟನ್ ಕೇನ್ ನಿಂದ ಸಿಟಿಜನ್ ಜರ್ನಲಿಸ್ಟ್‌ನತ್ತ ಹೊರಟ ಈ ದಾರಿಯಲ್ಲಿ ಹಿಂತಿರುಗುವ ಮಾತಿಲ್ಲ. ಆದ್ದರಿಂದ ಸಿಟಿಜನ್ ಜರ್ನಲಿಸಂ ಹೊಸ ಯುಗದ "ಮಾಧ್ಯಮ ಶಕ್ತಿ" ಎನ್ನುವುದು ನನ್ನ ಅಭಿಪ್ರಾಯ.

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ; ನಮಸ್ಕಾರ.

ಶುಭಹಾರೈಕೆಗಳು

ಪತ್ರಕರ್ತ ಮಿತ್ರರನ್ನು ಸ್ನೇಹದ ಬಂಧನದಲ್ಲಿ ಬೆಸೆಯುವುದಕ್ಕೆ ಹಾಗೂ ಪತ್ರಿಕಾ ಚಟುವಟಿಕೆಗಳಿಗೆ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿರುವ ಬೆಂಗಳೂರು ಪ್ರೆಸ್ ಕ್ಲಬ್ ಎಂದರೆ ಪತ್ರಕರ್ತ ಮಿತ್ರರಿಗೆ ಆತ್ಮೀಯ ತಾಣ. ಇಂಥದೊಂದು ಉಲ್ಲಾಸಯುತ ವಾತಾವರಣ ಕಲ್ಪಿಸಲು ನೆಲೆಕಂಡುಕೊಂಡು, ತಲೆಯೆತ್ತಿನಿಂತ ಬೆಂಗಳೂರು ಪ್ರೆಸ್ ಕ್ಲಬ್ ಗೆ ಈಗ 40 ವರ್ಷಗಳ ಸಂಭ್ರಮದ ಹರ್ಷ. ಈ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ಬಿನ ಎಲ್ಲ ಸದಸ್ಯರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಪರವಾಗಿ ಶುಭಹಾರೈಕೆಗಳು.

A PROUD AND PASSIONATE SCRIBE

RAJAN BALA


By: P.R. VISWANATHAN

Rajan Bala and I became good friends on our first meeting itself. That was in Jan 1967 during the India-West Indies cricket Test match in Chennai. It was certainly not a tale of ‘love at first sight’ between two cub reporters. I can, however, say that there was mutual admiration during that first week of our friendship and it lasted for 42 long years without a spell of misunderstanding.

In 2009 we both thought that our friendship might as well celebrate golden jubilee. Rajan said, “Oh. Eight more years! If it happens, we must celebrate it in a grand manner. Hope one us do not get run out.” And he passed away in September perhaps with the idea of celebration looming large on his mental screen.

After that 1967 meeting, Rajan and I used to meet only once in a blue moon depending on our respective assignments. After all, he was based in Kolkata and me in Chennai. But the erratic frequency of our meetings did not keep our minds away. In 1973 I joined The Hindu Bangalore, and, in 1976-77 Rajan joined The Hindu Chennai. That brought us closer.

When Rajan joined Deccan Herald Bangalore in 1980, we started meeting each other on a daily basis. The period 1980-84 saw the best moments of our friendship. Then Rajan left for Chennai (Indian Express) and then to Mumbai (Indian Express) and so our meeting too became rare. But the mutual admiration and affection did not diminish.

Rajan was back in Bangalore in 1998-99 once and for all. He always loved Bangalore. And God was kind enough to see that Rajan breathed his last in this city! Rajan loved Bangalore mainly because the Bangalore Sports journalists reserved a soft corner for him.

During our one-to-one meetings, Rajan used to become emotional whenever we spoke about Bangalore and its sports journalists. “No one loves me as honestly and instinctively as them.” Perhaps Rajan, who has worked in as many Indian cities as possible, would not have found a set of friends as affectionate and considerate as his friends in his favourite city.

While Bangalore sports scribes saw the “MAN” in Rajan Bala, most others might have seen only the “journalist” in Rajan Bala. That must be the reason for Rajan’s love for Bangalore. Rajan often used to recall the “remarkable gesture” shown by the Bangalore sports journalists in 1980. Before he could complete his first year with Deccan Herald the SWAB made him its president. That was mainly because of the fact that Rajan was heading the “largest” sports department in the state.

Rajan enjoyed that ‘decoration’ as there was little or no opposition to that choice. SWAB, no doubt, had better and more popular personalities to be its president. But then SWAB members were matured enough to appreciate the status of Rajan, the sports editor of Karnataka’s prestigious newspaper. Rajan remained grateful to SWAB throughout.

When he settled down in Bangalore in late 1990s Rajan strengthened his relationship with SWAB and its members. Rajan, a journalist with a wonderful work-culture, will ever be remembered as one of the finest cricket writers Indian has ever produced. He was so passionate when it comes to cricket and cricketers. There is indeed a child in all adult male and female. I had often seen the ‘child’ in Rajan Bala. That child made me admire Rajan more than anything else.

P.R. VISWANATHAN

ಸ್ವ್ಯಾಬ್ ಬೆಳವಣಿಗೆಗೆ ಶ್ರಮಿಸಿದ ಗೋಪಾಲ ಹೆಗಡೆ







ಸ್ವ್ಯಾಬ್ ಬೆಳವಣಿಗೆಗೆ ಶ್ರಮಿಸಿದ ಗೋಪಾಲ ಹೆಗಡೆ

ನೇರ ಹಾಗೂ ದಿಟ್ಟ ಮಾತಿನ ಶ್ರೀ. ಗೋಪಾಲ ಹೆಗಡೆ ಅವರು ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಬೆಳವಣಿಗೆಯಲ್ಲಿ ಶ್ರಮಿಸಿದ ಮಹನೀಯರಲ್ಲಿ ಒಬ್ಬರು. "ಸ್ವ್ಯಾಬ್" ತನ್ನ 35ನೇ ವರ್ಷದ ಸಂಭ್ರಮದಲ್ಲಿ ಇರುವ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಅಗತ್ಯವಾಗಿದೆ.

"ಸ್ವ್ಯಾಬ್" ವಿವಿಧ ಪದಾಧಿಕಾರಿ ಸ್ಥಾನಗಳಲ್ಲಿ ಇದ್ದು ಅವರು ಈ ನಮ್ಮ ಕ್ರೀಡಾ ಬರಹಗಾರರ ಸಂಘದ ಬೆಳವಣಿಗೆಗೆ ತಮ್ಮ ಶ್ರಮದ ಬೆವರು ನೀರನ್ನು ಎರೆದಿದ್ದಾರೆ. ಈ ಸಂಘದ ನೆನಪುಗಳ ಬುತ್ತಿಯನ್ನು ಬಿಚ್ಚಿದರೆ ಗೋಪಾಲ ಹೆಗಡೆ ಅವರು ಪಟ್ಟಿರುವ ಶ್ರಮ ಎಷ್ಟೊಂದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

"ಸಹಕಾರ"-"ಅಸಹಕಾರ" ಏನೇ ಇರಲಿ; ತಾವು ಅಂದುಕೊಂಡದ್ದನ್ನು ಮಾಡಿ ತೋರಿಸುವ ಛಲವನ್ನು ತೋರಿದವರು ಗೋಪಾಲ ಹೆಗಡೆ. ಅವರ ನೇರ ಮಾತುಗಳ ಕೆಲವೊಮ್ಮೆ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗೆಂದು ಅವರೆಂದೂ ತಮ್ಮ ದಿಟ್ಟ ನುಡಿಯನ್ನು ಹಿಂದಕ್ಕೆ ತೆಗೆದುಕೊಂಡವರಲ್ಲ. ಅವರ ದಿಟ್ಟ ಮಾತುಗಳು ಸ್ವ್ಯಾಬ್ ಹಿತಕ್ಕಾಗಿ ಆಡಿದವಾಗಿರುತ್ತಿದ್ದವು. ಆದ್ದರಿಂದ ಅವರು ತಮ್ಮ ನಿರ್ಣಯಗಳಿಗೆ ಅಂಟಿಕೊಂಡು ಗಟ್ಟಿಯಾಗಿ ನಿಂತವರು.

ಎಂಬತ್ತು ಹಾಗೂ ತೊಂಬತ್ತರ ದಶಕದಲ್ಲಿ ಗೋಪಾಲ ಹೆಗಡೆ ಅವರು ಕ್ರೀಡಾ ಬರಹಗಾರರ ಸಂಘದ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ವೃತ್ತಿ ಚಟುವಟಿಕೆಗೆ ಒಂದಿಷ್ಟೂ ತೊಡಕಾಗದಂತೆಯೇ ಅವರು ಸ್ವ್ಯಾಬ್ ಚಟುವಟಿಕೆಗಳಿಗೂ ಸಮಯವನ್ನು ವಿನಿಯೋಗಿಸಿದವರು.

ಆದ್ದರಿಂದಲೇ ನಾನಿಲ್ಲಿ ಒಬ್ಬ ಹಿರಿಯ ಕ್ರೀಡಾ ಪತ್ರಕರ್ತರು ಗೋಪಾಲ ಹೆಗಡೆ ಅವರ ಬಗ್ಗೆ ಆಡಿದ ಮಾತನ್ನು ಸ್ಮರಿಸಲು ಇಷ್ಟಪಡುತ್ತೇನೆ. "ಗೋಪಾಲ ಅಂದರೆ ಅವನು ಯಾವುದೇ ಕೆಲಸದಲ್ಲಿ ದೈತ್ಯ. ಎಲ್ಲವನ್ನೂ ಮಾಡಿ ಮುಗಿಸುತ್ತಾನೆ. ತಾನು ಅಂದುಕೊಂಡಿದ್ದನ್ನು ಮುಗಿಸುವವರೆಗೆ ಅವನು ನಿಲ್ಲುವುದೇ ಇಲ್ಲ; ಆ ಕೆಲಸ ಮುಗಿಯುವವರೆಗೆ ಚಡಪಡಿಸುತ್ತಾನೆ. ಒಮ್ಮೆ ಆ ಕೆಲಸ ಮುಗಿದ ಮೇಲೆ ಮತ್ತೊಂದರ ಬೆನ್ನು ಹತ್ತುತ್ತಾನೆ" ಎಂದು ಆ ಹಿರಿಯ ಕ್ರೀಡಾ ಪತ್ರಕರ್ತರು ಹೇಳಿದ್ದರು.

ನಿಜವಾಗಿಯೂ ಈ ಮಾತು ಗೋಪಾಲ ಹೆಗಡೆ ಅವರ ಕಾರ್ಯದಕ್ಷತೆ ಹಾಗೂ ಕೆಲಸ ಮಾಡುವ ಉತ್ಸಾಹವನ್ನು ಬಿಂಬಿಸುತ್ತದೆ. ಸ್ವ್ಯಾಬ್ ಬಗ್ಗೆ ಈಗಲೂ ಕಳಕಳಿಯಿಂದ ಮಾತನಾಡುತ್ತಾರೆ ಹೆಗಡೆ ಅವರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾಗಿ ಹೋದರೂ, ಅವರು ಸ್ವ್ಯಾಬ್ ಚಟುವಟಿಕೆಗಳ ಜೊತೆಗೆ ತಮ್ಮ ನಂಟು ಉಳಿಸಿಕೊಳ್ಳಲು ಸದಾ ಪ್ರಯತ್ನ ಮಾಡಿದ್ದಾರೆ. ಈಗಲೂ ಸ್ವ್ಯಾಬ್ ವಿಷಯವನ್ನು ಎತ್ತಿದರೆ ಹಲವಾರು ಇತಿಹಾಸದ ಪುಟಗಳನ್ನು ತೆರೆದಿಡುತ್ತಾರೆ.

ಸ್ವ್ಯಾಬ್ ಕ್ರೀಡಾ ಚಟುವಟಿಕೆ ಆಯೋಜಿಸಿದ್ದಾಗಲೆಲ್ಲ ಮುಂಚೂಣಿಯಲ್ಲಿ ಇರುತ್ತಿದ್ದವರೇ ಗೋಪಾಲ ಹೆಗಡೆ. ಅವರ ಉತ್ಸಾಹವು ನಮ್ಮಂಥ ಯುವಕರಿಗೆ ಮಾದರಿ ಆಗುವಂಥದು. ಹೆಗಡೆ ಅವರಲ್ಲಿನ ಒಂದು ಗುಣ ಮೆಚ್ಚುವಂಥದು; ಅದು ಅವರ ನೇರ ಮಾತು. ಮನದಲ್ಲಿ ಏನನ್ನು ಮರೆಮಾಡುವುದಿಲ್ಲ. ಅವರ ಈ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗಿರದೆಯೂ ಇರಬಹುದು. ಆದರೆ ಅಂಥದೊಂದು ಗುಣ ಎಲ್ಲರಲ್ಲಿಯೂ ಅಗತ್ಯ. ಒಂದು ಸಂಘಟನೆಯಲ್ಲಿ ಕೆಲಸ ಮಾಡುವಾಗ ಎಲ್ಲರನ್ನೂ ನೇರವಾಗಿ ಎದುರಿಸಿ, ಮಾತನಾಡಿ ದಿಟ್ಟತನ ತೋರುವುದು ಒಳ್ಳೆಯದು.

ಒಂದು ಒಳ್ಳೆಯ ಕೆಲಸ ಆಗಬೇಕು ಎಂದರೆ ಗೋಪಾಲ ಹೆಗಡೆ ಅವರಂತೆ ದಣಿಯದ ಉತ್ಸಾಹದಿಂದ ಹಾಗೂ ದಿಟ್ಟತನದಿಂದ ಕೆಲಸ ಮಾಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ. ಆಗಲೇ ಅನೇಕ ಸವಾಲುಗಳನ್ನು ಮೀರಿ ಒಳಿತಾಗುವ ಕೆಲಸವೊಂದನ್ನು ಮಾಡಲು ಸಾಧ್ಯವಾಗುತ್ತದೆ. ಅಂಥದೊಂದು ಸಾಧ್ಯತೆಯ ಮಾರ್ಗವನ್ನು ತೋರಿಸಿಕೊಟ್ಟವರು ಗೋಪಾಲ ಹೆಗಡೆ.

ತಮ್ಮ ಪ್ರಯೋಜನಕ್ಕೆ ಸ್ವ್ಯಾಬ್ ಅಲ್ಲ; ಸ್ವ್ಯಾಬ್ ಕೆಲಸಕ್ಕಾಗಿ ತಾವು ಎನ್ನುವಂಥ ಗುಣದೊಂದಿಗೆ ತಮ್ಮ ಬೆವರು ಹನಿಗಳ ಅಚ್ಚನ್ನು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಇತಿಹಾಸದ ಪುಟಗಳಲ್ಲಿ ಮೂಡಿಸಿದ್ದಾರೆ ಗೋಪಾಲ ಹೆಗಡೆ. 35ನೇ ವರ್ಷದ ಸಂಭ್ರಮದಲ್ಲಿರುವ "ಸ್ವ್ಯಾಬ್" ಇತಿಹಾಸದಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿದ ಗೋಪಾಲ ಹೆಗಡೆ ಅವರಿಗೆ ಧನ್ಯವಾದಗಳು.

-ಡಿ.ಗರುಡ

ಸ್ವ್ಯಾಬ್ ಸಮಾರಂಭಗಳಲ್ಲಿ ಕ್ರಿಕೆಟಿಗರು...!


ವಿಶ್ವ ಖ್ಯಾತ ಸ್ಪಿನ್ ಬೌಲರ್ ಇ.ಎ.ಎಸ್. ಪ್ರಸನ್ನ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಂಭ್ರಮದಲ್ಲಿ ಯುವ ಕ್ರೀಡಾಪಟು.


ಕ್ರಿಕೆಟ್ ತಂಡದ ನಾಯಕರಾಗಿದ್ದ ಸುಜಿತ್ ಸೋಮಸುಂದರ್ ಅವರಿಗೆ ಒಲಿಂಪಿಕ್ ಹಾಕಿ ಮಾಜಿ ಆಟಗಾರ ಎಂ.ಪಿ.ಗಣೇಶನ್ ಅವರಿಂದ ಪ್ರಶಸ್ತಿ ಪ್ರದಾನ.



ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರಿಂದ ಸ್ವ್ಯಾಬ್ ಆಯೋಜಿಸಿದ ಕ್ರೀಡಾಕೂಟದಲ್ಲಿ ವಿಜೇತರಾದರಿಗೆ ಟ್ರೋಫಿ.


ಹಿರಿಯ ಕ್ರೀಡಾ ಪತ್ರಕರ್ತ ಡೆಡ್ಲಿ ಪೆರೆರಾ ಅವರು ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ. ಚಿತ್ರದಲ್ಲಿ ಗೋಪಾಲ ಕೃಷ್ಣ ಹೆಗಡೆ ಅವರನ್ನೂ ಕಾಣಬಹುದು.


ರೋಜರ್ ಬಿನ್ನಿ ಅವರಿಗೆ ಹಿರಿಯ ಕ್ರೀಡಾ ಪತ್ರಕರ್ತರಾದ ಪಿ.ಆರ್.ವಿಶ್ವನಾಥನ್ ಅವರಿಂದ ನೆನಪಿನ ಕಾಣಿಕೆ.


ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಅವರು ಪ್ರಶಸ್ತಿ ಪ್ರಧಾನ ಮಾಡಿದಾಗಿನ ಕ್ಷಣ.


ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಖ್ಯಾತ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಜಾವಗಲ್ ಶ್ರೀನಾಥ್ ಅವರು ಪಾಲ್ಗೊಂಡು ಪ್ರಶಸ್ತಿ ವಿಜೇತರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಾಗ...!










ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಅನೇಕ ಬಾರಿ ಅಂತರ ಮಾಧ್ಯಮ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುತ್ತಾ ಬಂದಿದೆ. ಮುಂದೆಯೂ ಅಂಥ ಚಟುವಟಿಕೆಗಳನ್ನು ನಡೆಸುವ ಉತ್ಸಾಹವನ್ನೂ ಹೊಂದಿದೆ. ಈ ಹಿಂದೆ ಸ್ವ್ಯಾಬ್ ಆಶ್ರಯದಲ್ಲಿ ನಡೆದಿದ್ದ ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಕೆಲವು ಕ್ಷಣಗಳು ಇಲ್ಲಿವೆ.

"ಸ್ವ್ಯಾಬ್" ಜೊತೆಗೆ ಸದಾ ನಿಂತ ಪೊನ್ನಪ್ಪ






"ಪ್ರಜಾವಾಣಿ"ಯಲ್ಲಿ ಈಗ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಂ.ಎ. ಪೊನ್ನಪ್ಪ ಅವರು ಮೂವತ್ತೈದು ವರ್ಷಗಳ ಕಾಲದಿಂದಲೂ "ಸ್ವ್ಯಾಬ್" ಜೊತೆಗೆ ಇದ್ದು ಇದರ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡು ಬಂದವರು. ಅಷ್ಟೇ ಅಲ್ಲ ಈ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಇದ್ದುಕೊಂಡು ಅನೇಕ ಚಟುವಟಿಕೆಗಳನ್ನು ಆಯೋಜಿಸಿದವರು. ಪೊನ್ನಪ್ಪ ಹಾಗೂ "ಸ್ವ್ಯಾಬ್" ಜೊತೆಗಿನ ನಂಟು ಎಂಥದು ಎನ್ನುವುದಕ್ಕೆ ಇಲ್ಲಿರುವ ಕೆಲವು ಚಿತ್ರಗಳೇ ಸಾಕ್ಷಿ.

ನೆನಪುಗಳ ಬುತ್ತಿ... ಕಪ್ಪು-ಬಿಳುಪಿನಲ್ಲಿ...!



ದಶಕಗಳ ಹಿಂದೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (ಎಡದಿಂದ ಬಲಕ್ಕೆ: ಎಚ್.ಎಸ್. ಸೂರ್ಯನಾರಾಯಣ (ಸೂರಿ), ಪಿ.ಆರ್. ವಿಶ್ವನಾಥ್, ಖ್ಯಾತ ಕ್ರಿಕೆಟ್ ಆಟಗಾರ ಇ.ಎ.ಎಸ್. ಪ್ರಸನ್ನ, ಖ್ಯಾತ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಹಾಗೂ ಗೋಪಾಲಕೃಷ್ಣ ಹೆಗಡೆ ಅವರು ಪಾಲ್ಗೊಂಡ ಅಮೂಲ್ಯವಾದ ಕ್ಷಣಗಳು ಈ ಎರಡು ಚಿತ್ರಗಳಲ್ಲಿ ದಾಖಲಾಗಿವೆ.

ಈ ಎರಡು ಚಿತ್ರಗಳು ಸ್ವ್ಯಾಬ್ ಬೀರುವಿನಲ್ಲಿ ಇದ್ದ ಅತ್ಯಂತ ಹಳೆಯ ಚಿತ್ರಗಳು. ಕಪ್ಪು-ಬಿಳುಪು ಚಿತ್ರಗಳ ಕಾಲದಿಂದ ನಮ್ಮ ಸ್ವ್ಯಾಬ್ ಚಟುವಟಿಕೆ ನಡೆಸಿಕೊಂಡು ಬಂದಿದೆ ಎನ್ನುವುದಕ್ಕೆ ಸಾಕ್ಷಿ. ಮಹತ್ವದ ಇತಿಹಾಸವನ್ನು ಈ ಚಿತ್ರಗಳು ನಮ್ಮ ಮುಂದೆ ಇಟ್ಟಿವೆ.

"ಸ್ವ್ಯಾಬ್"ಗಾಗಿ ಓಡಿದ ಸೂಪರ್ ಮಾಡೆಲ್...!


ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ಸೂಪರ್ ಮಾಡೆಲ್ ಅವಿನಾಶ್ ಅವಸ್ಥಿ ಅವರು "ಸ್ವ್ಯಾಬ್" 35ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶೇಷವಾದ ಶುಭ ಹಾರೈಕೆ ಕಳುಹಿಸಿದ್ದಾರೆ. ಆ ಚಿತ್ರ ಇಲ್ಲಿದೆ ನೋಡಿ...!

"ಸ್ವ್ಯಾಬ್" ನೆನಪುಗಳ "ಖಜಾನೆ"

ಅದೊಂದು ನೆನಪುಗಳ ಖಜಾನೆ! ಹೌದು. ಒಂದೊಂದೇ ಫೈಲ್ ಹಾಗೂ ಆಲ್ಬಮ್ ಅನ್ನು ತಿರುವಿ ಹಾಕಿದರೆ ಅಲ್ಲಿ ನೆನಪುಗಳ ದೊಡ್ಡ ಬುತ್ತಿಯ ಗಂಟನ್ನು ತೆಗೆದ ಅನುಭವ. ಅಲ್ಲಿದ್ದ ನೆನಪಿನ ಸಂಚಿಕೆಗಳು ಕೂಡ ಸಾಕಷ್ಟು. ಅವೆಲ್ಲವನ್ನೂ ನೋಡಿದಾಗ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ತನ್ನ 35 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಅದೆಷ್ಟೊಂದು ಚಟುವಟಿಕೆಗಳನ್ನು ನಡೆಸಿದೆ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.

ನಾನು "ಸ್ವ್ಯಾಬ್" ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡ ನಂತರ ನನ್ನ ಕೈಯಾರೆ ಸ್ವ್ಯಾಬ್ ಬೀರುವನ್ನು ತೆಗೆದಿದ್ದು ಇಂದು ಅಂದರೆ ಬುಧವಾರ (26ನೇ ಮೇ 2010). ಇದಕ್ಕೂ ಮುನ್ನ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಈಗಿನ ಅಧ್ಯಕ್ಷರಾದ ಶ್ರೀಕುಮಾರ್ ಅವರು ಎರಡು ಬಾರಿ ಪ್ರೆಸ್ ಕ್ಲಬ್ ಕೋಣೆಯ ಒಂದು ಮೂಲೆಯಲ್ಲಿರುವ ಸ್ವ್ಯಾಬ್ ಬೀರುವನ್ನು ತೋರಿಸಿದ್ದರು. "ಹಳೆಯ ಸಾಕಷ್ಟು ದಾಖಲೆಗಳು ಇಲ್ಲಿವೆ; ಒಮ್ಮೆ ನೋಡಿ" ಎಂದು ಶ್ರೀಕುಮಾರ್ ಅವರು ಹೇಳಿದ್ದರು. ಅದಕ್ಕೆ ತಕ್ಕಂತೆ ಸಮಯ ಮಾಡಿಕೊಂಡು ಸುಮಾರು ಮೂರು ತಾಸು ಪ್ರತಿಯೊಂದು ಹಳೆಯ ಫೈಲ್, ಆಲ್ಬಮ್ ಹಾಗೂ ಸ್ಮರಣ ಸಂಚಿಕೆಗಳನ್ನು ನೋಡಿದೆ.

ಅದೊಂದು ಅದ್ಭುತ ಅನುಭವವೇ ಸರಿ. ಏಕೆಂದರೆ ನಾನು ನೋಡಿದ ಅಲ್ಲಿನ ಪ್ರತಿಯೊಂದು ದಾಖಲೆ ಪತ್ರವೂ ಸ್ವ್ಯಾಬ್ ಇತಿಹಾಸವನ್ನು ನನ್ನ ಕಣ್ಣೆದುರು ತೆರೆದು ಇಟ್ಟಿತು. ಆದರೆ ಒಂದಿಷ್ಟು ಬೇಸರವೂ ಆಯಿತು; ಮೂರು ತಾಸು ಪ್ರತಿಯೊಂದು ಫೈಲ್ ಮೇಲೆ ವರ್ಷಗಳ ಕಾಲದಿಂದ ಕುಳಿತಿದ್ದ ದೂಳು ಹಾರಿಸುವ ಕೆಲಸವನ್ನೂ ಮಾಡಬೇಕಾಯಿತು. ಅಷ್ಟೊಂದು ಅಮೂಲ್ಯವಾದ ದಾಖಲೆಗಳನ್ನು ನಾವು ಹೀಗೆ ಇಟ್ಟುಕೊಂಡಿದ್ದೇವಲ್ಲಾ ಎಂದು ಮನಸ್ಸಿಗೆ ಒಂದಿಷ್ಟು ಕಸಿವಿಸಿಯೂ ಆಯಿತು.

ನಮ್ಮ ಹಿರಿಯರು ಸ್ವ್ಯಾಬ್ ಬೆಳವಣಿಗೆಗಾಗಿ ಪಟ್ಟ ಶ್ರಮವನ್ನು ಎತ್ತಿ ತೋರಿಸುವಂತೆ ಅದಕ್ಕೊಂದು ಶೋಕೇಸ್ ಮಾಡಿಸುವ ಅಗತ್ಯವಿದೆ ಎಂದು ಕೂಡ ಅನಿಸಿತು. ಕರ್ನಾಟಕದ ಕ್ರೀಡಾ ಪತ್ರಿಕೋದ್ಯಮದ ಇತಿಹಾಸ ಬರೆದರೆ ಅದಕ್ಕೆ ಪೂರಕವಾಗುವಂತ ಅನೇಕ ಅಂಶಗಳು ಅಲ್ಲಿರುವ ಫೈಲ್ ಹಾಗೂ ಸ್ಮರಣ ಸಂಚಿಕೆಯಲ್ಲಿ ದಾಖಲಾಗಿವೆ. ವಿಶೇಷವಾದ ಲೇಖನಗಳನ್ನು ಕೂಡ ಆ ಸ್ಮರಣ ಸಂಚಿಕೆಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಸ್ವ್ಯಾಬ್ ಬೆಳವಣಿಗೆಗಾಗಿ ಬೆವರು ಸುರಿಸಿದ ಎಲ್ಲರ ನೆನಪು ಕೂಡ ಆ ದಾಖಲೆ ಪತ್ರಗಳಲ್ಲಿ ಅಡಗಿದೆ.

ಅಲ್ಲಿ ದೊರೆತಿರುವ ಎಲ್ಲ ವಿಷಯಗಳನ್ನು ಚುಟುಕಾಗಿ ಹೇಳುವುದು ಕಷ್ಟ. ಆದ್ದರಿಂದ ಅವುಗಳನ್ನು ತಮ್ಮ ಮುಂದೆ ಸರಣಿಯಾಗಿ ಹರಿಬಿಡುವುದು ನನ್ನ ಉದ್ದೇಶ. ಅಷ್ಟೇ ಅಲ್ಲ "ಸ್ವ್ಯಾಬ್ ನೆನಪಿನ ಖಜಾನೆ"ಯಂತೆ ಇರುವ ಪ್ರೆಸ್ ಕ್ಲಬ್ ಕೋಣೆಯಲ್ಲಿನ ಬೀರುನಲ್ಲಿ ಸಂಗ್ರಹವಾಗಿರುವ ಆಲ್ಬಮ್ ಒಳಗಿರುವ ಅನೇಕ ಚಿತ್ರಗಳನ್ನು ತಮ್ಮ ಮುಂದೆ ಇಡುವ ಪ್ರಯತ್ನವನ್ನು ಇದೇ ಬ್ಲಾಗ್ ಮೂಲಕ ಮಾಡಲು ಯತ್ನಿಸುತ್ತೇನೆ. ಜೊತೆಗೆ ಹಳೆಯ ನೆನಪಿನ ಸಂಚಿಕೆಗಳಲ್ಲಿನ ಲೇಖನಗಳನ್ನು ತಮ್ಮ ಮುಂದೆ ಯಥಾವತ್ತಾಗಿ ಇಡುವ ಪ್ರಯತ್ನವನ್ನೂ ಮಾಡಲಾಗುವುದು.

-ಡಿ.ವಿ. ಗರುಡ

SEMINAR FOR YOUNG SPORTS JOURNALISTS

The Iranian Sports Journalists' Association is going to organise a seminar for young sports journalists (under the age of 25) in Tehran in July.

SJFI can recommend a maximum of two sports scribes within the age group of 25 and under. The ISJA will provide lodge and boarding during the seminar in Tehran. Flight tickets from town or city in India to Tehran and back will have to be taken care of by the applicants.

Dead-line for sending the application form is June 15, 2010.

For Application Form and more information, please contact:

swab.reporters@gmail.com


SWAB 35th Year Celebration

SWAB 35th Year Celebration

P.R. VISWANATHAN


Whenever SWAB gets into a mood to celebrate, it is bound to remember H.S. Suryanarayana ('Suri', 'HSS') with strong sense of admiration, pride and gratitude. Introducing HSS just as a father figure will not speak eloquently of his huge image in the field of Kannada sports journalism. He was the first ever Kannada sports editor!

HSS was a committed and affectionate father to all the aspiring and young sports journalists since 1960 till he breathed his last during the last decade of the previous century. Towards the end of 1960s the Sports Journalists Federation of India was formed with the four zones (North, east, west and south) as its affiliated units.

Considering the meagre number of sports journalists in India itself, this format (four zones) was generally accepted during that period. So Bangalore (like Hyderabad) came under Tamil Nadu. “We must establish our own association and get it affiliated to the SJFI”, HSS felt. That was a long-term thinking. HSS must have realised that the number of sports journalists in Bangalore was bound to increase sooner or later. “Let us get ready for that”.

Thus the SWAB was born in the summer of 1974. With DH Srinivas, a childhood friend of HSS and his colleague in Prajavani, was like ‘Chickappa’ to all of us while S Devanth played the role of the eldest brother quite competently. Devanth went to on to becomeSAWB’s president and the SJFI vice-president later.


Hafeez is about our best treasurer till date. Precisely, he inspired all of us to understand the importance of a treasurer. The SWAB, in its inaugural year (1974) threw a party to visiting journalists at the West Indies-India Test Match in Bangalore(That was Garden City’s first ever Test match). And that was our first major function.


The visiting journalists carried sweet memories and also carried the message “SWAB can organise things”. Thanks to the periodical communications SWAB had with SJFI and others, we became very close with SJFI and its activities. HSS was the president and R Arvindam was the secretary. And Veni Madhav took over from Arvindam in 1978.


SWAB had to wait till 1983/84 to gain separate affiliation from the SJFI. During the annual convention of the SJFI in Kolkata, the cheque for the affiliation fee was paid and we were thrilled for being an independent unit affiliated to SJFI. The same year SWAB got up its first ever awards function at the IIM auditorium (Opposite New Indian Express office, Bangalore).


That function helped SWAB realise that the entire sports fraternity of the state was ready to support SWAB both morally and financially. That was a great source of inspiration and from then on SWAB has been coming up with worthy activities. And as HSS had visualised in 1974, the number of sports journalists too increased.


During this period, the wonderful services rendered by S Devanath, M.A. Ponnappa, Anand Philar,Gopal Hegde, Vedam Jaishankar, B.R. Sharan Kumar, S.S. Sreekumar, Sutram Suresh, Satyanarayana (formerly Timesof India, Bangalore) and TP Krishnamurthy (PTI) were mainly responsible for SWAB’s success in almost all its efforts. I consider myself fortunate to have been the president of SWAB for two terms between 1990 and 1997.


It is my duty here to record the fact that there had been spells of inaction during the last 13 or 14 years. Fortunately, such lean periods were not in long spells. The main reason for this inaction has been the working patterns of modern sports journalists. “Let us sit and discuss SWAB one of these days”. We used to suggest quite often during this period. But who would create that DAY?! That has been the problem.


But the SWAB is lucky in getting a set of enthusiastic members at the right juncture to revive SWAB. And these men have never failed. In fact, “Let us revive SWAB with a bang” has been the motto. Hence SWAB is maintaining its prestigious status in the State and national sports circles. It has always been young and enthusiastic persons who served SWAB with commitment and honesty. And always these youngsters get the needed encouragement from the senior members of SWAB. That’s the mantra of SWAB that would keep it good stead for many more years to come.



-P.R. VISWANATHAN

"ಸ್ವ್ಯಾಬ್"ಗೆ 35 ವರ್ಷಗಳ ಸಂಭ್ರಮ...!


ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ 35ನೇ ವರ್ಷದ ಸಂಭ್ರಮದ ಈ ಸಂದರ್ಭದಲ್ಲಿ "ಪ್ರಜಾವಾಣಿ"ಯ ಸಹಾಯಕ ಸಂಪಾದಕರಾದ ಶ್ರೀ. ಎಂ.ಎ. ಪೊನ್ನಪ್ಪ ಅವರು "ಸ್ವ್ಯಾಬ್ ರಿಪೋರ್ಟರ್ಸ್"ಗೆ ವಿಶೇಷವಾದ ಲೇಖನವನ್ನು ಬರೆದಿದ್ದಾರೆ. "ಸ್ವ್ಯಾಬ್" ಇತಿಹಾಸದ ಪುಟಗಳನ್ನು ತಿರುವಿಹಾಕುವ ಪ್ರಯತ್ನವಾಗಿದೆ ಈ ಲೇಖನ.


ಇದು ನಿಮಗೆ ತಿಳಿದಿರಲಿಕ್ಕಿಲ್ಲ! ಈ ವರ್ಷವು ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಹುಟ್ಟಿದ 35ನೇ ವರ್ಷಾಚರಣೆಯ ಹರ್ಷಪೂರ್ಣವಾದ ವರ್ಷ. 35 ವರ್ಷಗಳಷ್ಟು ದೊಡ್ಡ ಇತಿಹಾಸ ಹೊಂದಿರುವ "ಸ್ವ್ಯಾಬ್"ಗೆ ಹೊಸದೊಂದು ಕಳೆ ಹಾಗೂ ಉತ್ಸಾಹ ನೀಡುವ ಅಗತ್ಯ ಈಗ ಎದುರಾಗಿದೆ. ಒಂದಿಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಹೊಸದೊಂದು ಸ್ವರೂಪವನ್ನು ನೀಡುವ ಅಗತ್ಯವೂ ಇದೆ.

"ಸ್ವ್ಯಾಬ್" ಎನ್ನುವ ಕ್ರೀಡಾ ಬರಹಗಾರರ ಸಂಘವು ತನ್ನದೇ ಆದ ವಿಶೇಷತೆ ಹೊಂದಿದೆ. ಈ ಸಂಘವು ದೇಶದಲ್ಲಿಯೇ ಅತ್ಯಂತ ಹಳೆಯದಾದ ಕ್ರೀಡಾ ಪತ್ರಕರ್ತರ ಸಂಘಗಳಲ್ಲಿ ಒಂದೆನಿಸಿದೆ. "ಸ್ವ್ಯಾಬ್" ಕನ್ನಡ ನಾಡಿನ ಕ್ರೀಡಾ ಪತ್ರಿಕೋದ್ಯಮದ ಮಹಾನ್ ಇತಿಹಾಸದ ಭಾಗವಾಗಿ ಬೆಳೆದು ನಿಂತು, ಹೆಮ್ಮೆಯ ಗರಿಯನ್ನು ತನ್ನ ಕಿರೀಟದ ಸಿಂಗಾರವಾಗಿಸಿಕೊಂಡಿದೆ.


ಈ ಸಂಸ್ಥೆ ಸ್ಥಾಪನೆ ಮಾಡಿದ್ದು ಕನ್ನಡ ನಾಡಿನ ಎಲ್ಲಾ ಕ್ರೀಡಾ ಪತ್ರಕರ್ತರು ಒಂದು ವೇದಿಕೆಯಲ್ಲಿ ಸೇರಬೇಕು ಎನ್ನುವ ಉದ್ದೇಶದಿಂದ. ಆಗ ಟೆಲಿವಿಷನ್ ಮಾಧ್ಯಮವು ಅಷ್ಟೊಂದು ದೊಡ್ಡದಾಗಿ ಬೆಳೆದಿರಲಿಲ್ಲ. ಆದ್ದರಿಂದ ಆಗ ಕೇವಲ ಕೆಲವು ದೊಡ್ಡ ಪತ್ರಿಕೆಗಳಲ್ಲಿ ಕೆಲಸ ಮಾಡುವ ಕ್ರೀಡಾ ಉಪ ಸಂಪಾದಕರು, ಸಂಪಾದಕರು ಹಾಗೂ ವರದಿಗಾರರು ಮಾತ್ರ ಇದರ ಅಡಿಯಲ್ಲಿ ಒಂದಾಗಿದ್ದರು. ಆಗ ಬೆಂಗಳೂರಿನಲ್ಲಿ ಕ್ರೀಡಾಕೂಟಗಳನ್ನು ಛಾಯಾಗ್ರಹಣ ಮಾಡಲು ಬರುತ್ತಿದ್ದ ಫೋಟೊಗ್ರಾಫರುಗಳ ಸಂಖ್ಯೆಯೂ ತೀರ ಕಡಿಮೆ ಇತ್ತು. ಆದ್ದರಿಂದ ಅವರಿಗೂ "ಸ್ವ್ಯಾಬ್" ತನ್ನ ಛತ್ರಛಾಯೆಯಲ್ಲಿ ಅವಕಾಶ ಮಾಡಿಕೊಟ್ಟಿತ್ತು ಎನ್ನುವುದನ್ನು ಮರೆಯುವಂತಿಲ್ಲ.


ಆ ಕಾಲದಲ್ಲಿ ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಮಾತ್ರ ಕ್ರೀಡಾ ವರದಿಗಾರಿಕೆಯು ಒಂದು ಪ್ರತ್ಯೇಕ ವಿಭಾಗವಾಗಿತ್ತು. ಆದರೂ ಕೆಲವು ದೇಶಿ ಭಾಷೆಯ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರು ಇದ್ದರು. ಆದರೆ ಇಂಗ್ಲಿಷ್ ಪತ್ರಿಕೆಗಳಲ್ಲಿ ಇದ್ದಂತೆ ಕ್ರೀಡಾ ವಿಭಾಗ ಎನ್ನುವುದು ಪ್ರತ್ಯೇಕವಾಗಿ ಇರಲಿಲ್ಲ. ಆದ್ದರಿಂದ ದೇಶಿ ಭಾಷೆಯ ವರದಿಗಾರರು ಇತರ ವಿಷಯಗಳ ಜೊತೆಗೆ ಕ್ರೀಡಾ ವರದಿಗಾರಿಕೆಯನ್ನು ಮಾಡಿಕೊಂಡು ಬಂದಿದ್ದರು. ಆದರೆ ಆಗಲೂ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉಪ ಸಂಪಾದಕರು ಹಾಗೂ ವರದಿಗಾರರು ಕ್ರೀಡಾ ವರದಿಗಾರಿಗೆಯಲ್ಲಿ ಆಸಕ್ತಿ ಹೊಂದಿದವರು "ಸ್ವ್ಯಾಬ್" ಅಂಗವಾಗಲು ಉತ್ಸಾಹ ತೋರಿದ್ದರು.


ಬಾಷಾವಾರು ಪತ್ರಿಕೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಕ್ರೀಡೆಗೆ ಪ್ರತ್ಯೇಕವಾಗಿ ಕ್ರೀಡಾ ಪುಟವನ್ನು ಹೊರತಂದಿದ್ದ "ಪ್ರಜಾವಾಣಿ" ದಿನ ಪತ್ರಿಕೆಯ ಕ್ರೀಡಾ ವರದಿಗಾರರು ಹಾಗೂ ಉಪ ಸಂಪಾದಕರು ಮತ್ತು ಕ್ರೀಡಾ ಸಂಪಾದಕರು "ಸ್ವ್ಯಾಬ್" ಚಟುವಟಿಕೆಯಲ್ಲಿ ವಹಿಸಿದ ಪಾತ್ರ ಹಿರಿದು. ವಿಶೇಷವೆಂದರೆ ಇದೇ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದ ಕ್ರೀಡಾ ಸಂಪಾದಕರ ಕಲ್ಪನೆಯ ಸಾಕಾರ ರೂಪವೇ "ಸ್ವ್ಯಾಬ್".

ಅಂದು "ಪ್ರಜಾವಾಣಿ"ಯಲ್ಲಿ ಕ್ರೀಡಾ ಸಂಪಾದಕರಾಗಿದ್ದು ಎಚ್.ಎಸ್. ಸೂರ್ಯನಾರಾಯಣ (ಸೂರಿ). ಅವರ ಕನಸಿನ ಫಲವಾಗಿಯೇ ಕರ್ನಾಟಕದಲ್ಲಿ ಉದಯವಾಯಿತು ಕ್ರೀಡಾ ಬರಹಗಾರರ ಸಂಘ. ಇದು ಸ್ಥಾಪನೆಯಾಗಿದ್ದು 1975ರಲ್ಲಿ. ಮೊಟ್ಟ ಮೊದಲ ಸಭೆ ನಡೆದಿದ್ದು ಬೆಂಗಳೂರಿನ "ಏರ್ ಲೈನ್ಸ್ ಹೊಟೇಲ್" ಆವರಣದಲ್ಲಿ. ಅದೊಂದು ಸಹಜ ಚರ್ಚೆಯ ವೇದಿಕೆಯಂತೆ ಆಗ ಕಾಣಿಸಿತ್ತು. ಆದರೆ ಆನಂತರ ಅದಕ್ಕೊಂದು ಸ್ವರೂಪವೂ ದೊರೆತು "ಸ್ವ್ಯಾಬ್" ಎನ್ನುವ ಸತ್ವವುಳ್ಳ ಸಂಘಟನೆಯಾಗಿ ಬೆಳೆದು ನಿಂತಿತು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅಂದರೆ 1970ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಕ್ರಿಕೆಟ್ ಟೆಸ್ಟ್ ನಡೆದಾಗ ಕ್ರೀಡಾ ಬರಹಗಾರರ ಸಂಘ ಸ್ಥಾಪನೆ ಮಾಡುವ ಯೋಚನೆಯು ಮೊಳಕೆಯೊಡಿದಿತ್ತು. "ಸೂರಿ" ಅವರು ಇಂಥದೊಂದು ಸಂಘವನ್ನು ಕಟ್ಟುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಆಗ ಕರ್ನಾಟಕದ ಕ್ರೀಡಾ ವರದಿಗಾರಿಕೆ ಕ್ಷೇತ್ರದಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಪತ್ರಕರ್ತರು. ವಿಶೇಷವೆಂದರೆ ಮೊದಲ ಬಾರಿಗೆ ಕ್ರೀಡಾ ಬರಹಗಾರರ ಸಂಘಟನೆಯನ್ನು ಕಟ್ಟುವ ಯೋಚನೆ ಮಾಡಿದಾಗ ಅಲ್ಲಿ ಚರ್ಚೆಗೆ ಇದ್ದವರು ಕೇವಲ ಆರು ಮಂದಿ ಮಾತ್ರ.


"ಪ್ರಜಾವಾಣಿ"ಯ ಎಚ್.ಎಸ್. ಸೂರ್ಯನಾರಾಯಣ, ಎಸ್. ದೇವನಾಥ್, ದಾಸಪ್ಪ, ಡಿ.ಎಚ್. ಶ್ರೀನಿವಾಸ್, "ಪ್ರಜಾವಾಣಿ" ಕಡೆಗೆ ಬರುವ ಯೋಚನೆ ಮಾಡಿದ್ದ "ಕನ್ನಡ ಪ್ರಭ"ದ ಸಂಪಿಗೆ ಸುಬ್ಬಣ್ಣ, ಸಿ.ಎಸ್. ಪ್ರಭಾಕರ್, "ಪ್ರಜಾಮತ"ದಲ್ಲಿ ಅಂಕಣಕಾರರಾಗಿದ್ದ ಸಿದ್ದೇಗೌಡ (ಜಾನುಪ್ರಿಯ), "ಸಂಯುಕ್ತ ಕರ್ನಾಟಕ"ದಲ್ಲಿ ಉಪ ಸಂಪಾದಕರಾಗಿದ್ದು ಕ್ರೀಡಾ ವರದಿ ಬರೆಯುವಲ್ಲಿ ಆಸಕ್ತಿ ಹೊಂದಿದ್ದ ಪಿ.ಸಿ.ಅಪ್ಪಾಜಿ ಹಾಗೂ "ಲೋಕವಾಣ" ಯಲ್ಲಿ ಅರೆಕಾಲಿಕ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ನಾರಾಯಣಸ್ವಾಮಿ ಅವರು ಕ್ರೀಡಾ ಪತ್ರಕರ್ತರಿಗಾಗಿ ಒಂದು ಸಂಘ ಕಟ್ಟಬೇಕೆನ್ನುವ ಉತ್ಸಾಹ ತೋರಿದ್ದರು.


ಆದರೆ ಅಂದುಕೊಂಡಷ್ಟು ಬೇಗ ಸಂಘವನ್ನು ಕಟ್ಟುವ ಕೆಲಸ ಆಗಲಿಲ್ಲ. ಅದು ಸಾದ್ಯವಾಗಿದ್ದು ಐದು ವರ್ಷಗಳ ನಂತರ ಅಂದರೆ 1975ರಲ್ಲಿ. ಆ ಹೊತ್ತಿಗಾಗಲೇ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಕ್ರೀಡಾ ಬರಹಗಾರರು ಕಾಣಿಸಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವಂಥ ಕ್ರೀಡಾ ವರದಿಗಾರಿಗೆ ತಮ್ಮ ಸಾಮರ್ಥ್ಯವನ್ನೂ ತೋರಿದ್ದರು. 1975ರಿಂದ 80ರ ಅವಧಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗೆ ಭಾರಿ ಸಂಖ್ಯೆಯಲ್ಲಿ ಯುವ ಕ್ರೀಡಾ ಪತ್ರಕರ್ತರು ಸೇರಿದರು. ಇವರೊಂದಿಗೆ ಹಳಬರು ಸೇರಿಕೊಂಡು 1975ರಲ್ಲಿ ಸಂಘ ರಚನೆ ಮಾಡಲಾಯಿತು.


1975ರಲ್ಲಿ ಸಂಘ ಸ್ಥಾಪನೆ ಆದಾಗ "ಡೆಕ್ಕನ್ ಹೆರಾಲ್ಡ್" ಇಂಗ್ಲಿಷ್ ಪತ್ರಿಕೆಯಲ್ಲಿ ಲೆಸ್ಲಿ ವಿಲ್ಸನ್, ಆರ್. ಅರವಿಂದಮ್, ಜಿ. ಭಗವಾನ್, ಆನಂದ್ ಫಿಲಾರ್, ಎನ್.ಎಸ್. ಕೃಷ್ಣಸ್ವಾಮಿ, ಡೆಡ್ಲಿ ಪೆರಿರಾ, "ಪ್ರಜಾವಾಣಿ" ಕನ್ನಡ ಪತ್ರಿಕೆಯ ಎಚ್.ಎಸ್. ಸೂರ್ಯನಾರಾಯಣ, ಡಿ.ಎಚ್. ಶ್ರೀನಿವಾಸ್ (ಡಚ್ಚ), ಪಿ.ಸಿ. ಅಪ್ಪಾಜಿ, "ಸಂಯುಕ್ತ ಕರ್ನಾಟಕ"ದ ಎಸ್. ದೇವನಾಥ್ (ಆನಂತರ "ಪ್ರಜಾವಾಣಿ" ಸೇರಿದರು), "ಲೋಕವಾಣಿ" ಪತ್ರಿಕೆಯಲ್ಲಿದ್ದ ಎಂ.ಎ. ಪೊನ್ನಪ್ಪ, "ಕನ್ನಡ ಪ್ರಭ"ದ ಸಂಪಿಗೆ ಸುಬ್ಬಣ್ಣ, ಸಿ.ಎಸ್. ಪ್ರಭಾಕರ್, ಎ.ಆರ್. ಆನಂದ್, "ಆಕಾಶವಾಣಿ"ಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಎಸ್. ಪುರುಷೋತ್ತಮ್, "ಜನವಾಣಿ" ಮತ್ತು "ಪ್ರಜಾಮತ"ದ ಸಿದ್ದೇಗೌಡ (ಜಾನುಪ್ರಿಯ), "ಇಂಡಿಯನ್ ಎಕ್ಸ್ ಪ್ರೆಸ್" ಇಂಗ್ಲಿಷ್ ಪತ್ರಿಕೆಯ ವೇಣಿ ಮಾಧವ್, ಜಿ. ರುದ್ರ, ಶ್ರೀನಿವಾಸ್, ಡೆಂಜಿಲ್, "ಹಿಂದು" ಪತ್ರಿಕೆಯಲ್ಲಿ ಕೆಸಲ ಮಾಡುತ್ತಿದ್ದ ಪಿ.ಆರ್. ವಿಶ್ವನಾಥ್, "ಸಲಾರ್" ಪತ್ರಿಕೆಯ ಅಲಿ ಹಫೀಜ್, ಮುನೀರ್ ಸೇಠ್, "ಪಿ.ಟಿ.ಐ." ವರದಿಗಾರರಾಗಿದ್ದ ಇ. ರಾಘವನ್ ಅವರು "ಸ್ವ್ಯಾಬ್" ಎನ್ನುವ ದೊಡ್ಡ ಸಂಘವನ್ನು ಕಟ್ಟಲು ಅಡಿಗಲ್ಲು ಇಟ್ಟವರು.


1982ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಹಾಗೂ ಹಿರಿಯ ಕ್ರೀಡಾ ಪತ್ರಕರ್ತರು "ಸ್ವ್ಯಾಬ್" ಸಂಘಟನೆಯಲ್ಲಿ ತಮ್ಮ ಹೆಸರು ನೋಂದಾಯಿಸಿದರು. ಆನಂತರ ಅವರಲ್ಲಿ ಕೆಲವರು ಬೇರೆ ಬೇರೆ ಊರುಗಳಿಗೆ ತೆರಳಿದರು. ಆ ಕಾಲದಲ್ಲಿ "ಸ್ವ್ಯಾಬ್" ಪ್ರವಾಹದಲ್ಲಿ ಸೇರಿಕೊಂಡಿದ್ದು ಬಿ.ಆರ್. ಶರಣ್ ಕುಮಾರ್ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್), ವೇದಂ ಜೈಶಂಕರ್ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್), ರಾಜನ್ ಬಾಲಾ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ ಪ್ರೆಸ್), ಸತೀಶ್ ಪಾಲ್, ಸುರೇಶ್ ಪಾಲ್, ಡಿ. ರವಿಕುಮಾರ್ (ಡೆಕ್ಕನ್ ಹೆರಾಲ್ಡ್), ರೂಪಾ ರಾವ್ (ಇಂಡಿಯನ್ ಎಕ್ಸ್ಪ್ರೆಸ್), ಕಲ್ಯಾಣ್ ಅಶೋಕ್ (ದಿ ಹಿಂದೂ), ಎಚ್.ಎಸ್. ಮಂಜುನಾಥ್ (ಡೆಕ್ಕನ್ ಹೆರಾಲ್ಡ್), ಸಿ. ಗೋಪಾಲ ಕೃಷ್ಣ (ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ), ಗೋಪಾಲ ಕೃಷ್ಣ ಹೆಗಡೆ (ಸಂಯುಕ್ತ ಕರ್ನಾಟಕ, ಪ್ರಜಾವಾಣಿ), ಸುರೇಶ್ ಮೆನನ್ (ಡೆಕ್ಕನ್ ಹೆರಾಲ್ಡ್), ಎಸ್.ಎಸ್. ಶ್ರೀಕುಮಾರ್ (ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಹೆರಾಲ್ಡ್), ವಿಲ್ಸನ್ ಜೂನಿಯರ್ (ಡೆಕ್ಕನ್ ಹೆರಾಲ್ಡ್), ಶ್ಯಾಮ್ (ಡೆಕ್ಕನ್ ಹೆರಾಲ್ಡ್), ಪಟ್ನಂ ಅನಂತ ಪದ್ಮನಾಭ (ಪ್ರಜಾವಾಣಿ), ಕಲ್ಯಾಣ್ ಆನಂದ್ (ಡೆಕ್ಕನ್ ಹೆರಾಲ್ಡ್), ವಿಜಯ್ ಮೃತ್ಯುಂಜಯ (ಡೆಕ್ಕನ್ ಹೆರಾಲ್ಡ್), ಇಕ್ರಂ ಖಾನ್, ಚೆರಿಯನ್ ಥಾಮಸ್ (ಟೈಮ್ಸ್ ಆಫ್ ಇಂಡಿಯಾ).


ಆನಂತರದ ವರ್ಷಗಳಲ್ಲಿ ದಿನಪತ್ರಿಕೆಗಳ ನಡುವೆ ಪ್ರಸಾರ ಸಂಖ್ಯೆ ಹೆಚ್ಚಿಸಲು ಪ್ರಬಲ ಪೈಪೋಟಿ ನಡೆಯಿತು. ಇದರ ಪರಿಣಾಮವಾಗಿ ಅನೇಕ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರ ಸಂಖ್ಯೆಯೂ ಹೆಚ್ಚತೊಡಗಿತು. 1990ರ ಸುಮಾರಿಗೆ ಹೊಸ ತಲೆಮಾರಿನವರು ಭಾರಿ ಸಂಖ್ಯೆಯಲ್ಲಿ ಕ್ರೀಡಾ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದರು. ಕೆಲವರು ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಇಲ್ಲಿ ವಿವಿಧ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡತೊಡಗಿದರು. ರಾಜ್ಯದ ವಿವಿಧ ಭಾಗದಿಂದಲೂ ಕ್ರೀಡಾ ವರಿದಿಗಾರರು ಉದ್ಯಾನನಗರಿಗೆ ಬಂದರು.


ಆ ಒಂದು ದಶಕದಲ್ಲಿ ಕ್ರೀಡಾ ವರದಿಗಾರರು ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ಹೆಚ್ಚಾದರು. ಅದೊಂದು ಅಚ್ಚರಿಯೂ ಆಗಿತ್ತು. ಕ್ರೀಡಾ ವರದಿಗಾರರ ಸಂಖ್ಯೆ ಹೆಚ್ಚಿದಂತೆ "ಸ್ವ್ಯಾಬ್" ಸದಸ್ಯರ ಸಂಖ್ಯಾ ಬಲವು ಅಧಿಕವಾಯಿತು. ಅದೊಂದು ಪರಿವರ್ತನೆಯ ಕಾಲವೇ ಸರಿ. ಒಂದೆಡೆ ಪತ್ರಿಕೆಗಳ ನಡುವೆ ಸ್ಪರ್ಧೆ ಬಲವಾಗಿ ಕ್ರೀಡಾ ವರದಿಗಾರಿಕೆಗೆ ಒತ್ತು ಸಿಗುತ್ತಿದ್ದಂತೆಯೇ, ಇನ್ನೊಂದೆಡೆ ಕ್ರೀಡಾ ವರದಿಗಾರರ ಸಂಖ್ಯೆಯೂ ಹೆಚ್ಚಿ "ಸ್ವ್ಯಾಬ್" ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಯಿತು.


"ಕನ್ನಡ ಪ್ರಭ"ದ ಶ್ರೀಕರ್, "ದಿ ಹಿಂದೂ" ಪತ್ರಿಕೆಯ ಅವಿನಾಶ್ ನಾಯರ್, "ಪ್ರಜಾವಾಣಿ"ಯ ಪಿ.ಜಿ. ಪೂಣಚ್ಚ, ನಾಗೇಶ್ ಶೆಣೈ, ಅಮೃತ್ ಜೋಗಿ, ಶಿವಕುಮಾರ್ ಕಣಸೋಗಿ, ಸತೀಶ್ ಚಪ್ಪರಿಕೆ, ಡಿ.ವಿ. ಗರುಡ, ವಿಶಾಖ ಎನ್., ಸಿ.ಆರ್.ನವೀನ್, ("ಉದಯವಾಣಿ", ಆನಂತರ "ಪ್ರಜಾವಾಣಿ"), "ಪಿ.ಟಿ.ಐ." ವರದಿಗಾರ ಟಿ.ಪಿ. ಕೃಷ್ಣಮೂರ್ತಿ. "ಯು.ಎನ್.ಐ." ವರದಿಗಾರ ವಿಜಯ ಕುಮಾರ್, "ಸಂಯುಕ್ತ ಕರ್ನಾಟಕ"ದ ಎಚ್.ಕೆ. ವಿಶ್ವನಾಥ್, ಶ್ಯಾಮ ಸುಂದರ್, "ಕನ್ನಡ ಪ್ರಭ"ದ ಸಿ.ಆರ್. ಕೃಷ್ಣಮೂರ್ತಿ, ಡಿ.ಎಂ. ಭಟ್, ಸಿ. ಗೋಪಾಲಕೃಷ್ಣ (ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ), "ಡೆಕ್ಕನ್ ಹೆರಾಲ್ಡ್" ಪತ್ರಿಕೆಯ ಜೋಸೆಫ್ ಹೂವರ್ (ಇಂಡಿಯನ್ ಎಕ್ಸ್ ಪ್ರೆಸ್, ಆನಂತರ ಡೆಕ್ಕನ್ ಹೆರಾಲ್ಡ್), ಕೆ. ರಾಜೀವ್, ಗೀತಾ ರಾಮಕೃಷ್ಣ, ಆರ್. ಸತ್ಯ, ಆರ್. ಕೌಶಿಕ್, ವಿಜಯ್ ಮೈಕಲ್ ರಾಜ್, ಜಾನ್ ವರ್ಗಿಸ್, ನಾರಾಯಣ ಸ್ವಾಮಿ,, ಜಿ. ಕೃಷ್ಣನ್, ಪ್ರಜ್ವಲ್ ಹೆಗಡೆ (ಈಗ ಟೈಮ್ಸ್ ಆಫ್ ಇಂಡಿಯ), ಸತೀಶ್ ವಿಶ್ವನಾಥ್, ರವಿ ಚಕ್ರವರ್ತಿ (ಡೆಕ್ಕನ್ ಹೆರಾಲ್ಡ್, ಡಿ.ಎನ್.ಎ.), ರವಿ ಶಂಕರ್ (ದಿ ಹಿಂದೂ), ಮಗೇಶ್ವರನ್, ಡೇವಿಡ್, ಸತ್ಯ (ಇಂಡಿಯನ್ ಎಕ್ಸ್ ಪ್ರೆಸ್), ಕ್ರಿಸ್ಟೋಫರ್ ಹೂವರ್ (ಏಷ್ಯನ್ ಏಜ್), ಈಶ್ವರ್ ರಾವ್ (ದೂರದರ್ಶನ), ಸೂತ್ರಮ್ ಸುರೇಶ್ (ಟೈಮ್ಸ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯ), ವಿಜಯ ಕರ್ನಾಟಕದ ಜಗನ್ನಾಥ್, ಆನಂದ್ ಇವರೆಲ್ಲರೂ "ಸ್ವ್ಯಾಬ್" ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.


ರಾಘವೇಂದ್ರ ಗಣಪತಿ ಅವರೂ ಸ್ವಾಬ್ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು. 2000ದಿಂದ ಸ್ವಾಬ್ ಸದಸ್ಯರಾಗಿರುವ ರಾಘವೇಂದ್ರ ಗಣಪತಿ ಅವರು 1999ರಲ್ಲಿ ಸಂಯುಕ್ತ ಕರ್ನಾಟಕ ಸೇರಿದಾಗಿನಿಂದ ಕ್ರೀಡಾ ವರದಿಗಾರರಾಗಿದ್ದಾರೆ. "ಉದಯವಾಣಿ", "ಉಷಾಕಿರಣ", "ಟೈಮ್ಸ್ ಆಫ್ ಇಂಡಿಯಾ ಕನ್ನಡ" ಮತ್ತೀಗ ಉದಯವಾಣಿಯಲ್ಲಿ ಕ್ರೀಡಾ ಸಂಪಾದಕರಾಗಿ ಪ್ರಭಾವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೀಗೆ ಎಲ್ಲ ನಿಟ್ಟಿನಿಂದ ಹರಿದುಬಂದ ಕ್ರೀಡಾ ವರದಿಗಾರರ ಪ್ರವಾಹವು "ಸ್ವ್ಯಾಬ್" ಎನ್ನುವ ಆಣೆಕಟ್ಟನ್ನು ಭರ್ತಿ ಆಗಿಸಿತು. ಇದರಿಂದಾಗಿ ಚಟುವಟಿಕೆಗಳು ಚುರುಕು ಪಡೆದವು. ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ವಿಶಿಷ್ಟವಾದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲು ಸಾಧ್ಯವಾಯಿತು. ಆದರೆ ನಡುವೆ ಅನೇಕ ಅಡಚಣೆಗಳೂ ಇದ್ದವು. ಆದ್ದರಿಂದ ಕೆಲವು ಕಾಲ ಇಂಥ ಚಟುವಟಿಕೆಗಳು ನಡೆಯುವುದು ಕಷ್ಟವೂ ಆಯಿತು.


2000ನೇ ವರ್ಷದ ಈಚೆಗೆ ಕ್ರೀಡಾ ಪತ್ರಕರ್ತರ ಸಂಖ್ಯೆಯು ಇನ್ನಷ್ಟು ಜಾಸ್ತಿಯಾಯಿತು. "ಪ್ರಜಾವಾಣಿ"ಯ ಜಿ.ಸುಭಾಷ್ ಚಂದ್ರ, ಮಹಮದ್ ನೂಮಾನ್, ಕೆ. ಓಂಕಾರ ಮೂರ್ತಿ, "ಉದಯವಾಣಿ"ಯ ಪರಮೇಶ್ವರ ಗುಂಡ್ಕಲ್, ಮಲ್ಲಿಕಾಚರಣ್, ಸನತ್, ಪರಶುರಾಮ್, "ಕನ್ನಡ ಪ್ರಭ"ದ
ಜಿ.ಎಸ್.ಬಿ.ಅಗ್ನಿಹೋತ್ರಿ (ಕಳೆದ 2 ತಿಂಗಳಿಂದ ಸುವರ್ಣ ನ್ಯೂಸ್), ಸೋಮಶೇಖರ ಪಡುಕೆರೆ, "ಡೆಕ್ಕನ್ ಕ್ರಾನಿಕಲ್"ನ ಮನುಜಾ ವೀರಪ್ಪ, ಸಹನ್ ಬಿದ್ದಪ್ಪ, ಅಭಿಷೇಕ್, "ಡಿ.ಎನ್.ಎ."ನ ನಂದಿನಿ ಕುಮಾರ್, ವಿವೇಕ್ ಫಡ್ನೀಸ್, "ವಿಜಯ ಕರ್ನಾಟಕ"ದ ಎಂ.ಆರ್. ದಿಂಡಿಲಕೊಪ್ಪ, ರಮೇಶ್, ವಿರೂಪಾಕ್ಷ, "ಬೆಂಗಳೂರು ಮಿರರ್" ಪತ್ರಿಕೆಯ ಸುನಿಲ್ ಸುಬ್ಬಯ್ಯ, "ದಿ ಹಿಂದೂ"ನ ಕೆ.ಸಿ. ವಿಜಯಕುಮಾರ್, "ಟೈಮ್ಸ್ ಆಫ್ ಇಂಡಿಯಾ"ದ ಅಭಯ್ ಜೋಸ್, "ಡೆಕ್ಕನ್ ಹೆರಾಲ್ಡ್"ನ ಸಿಡ್ನಿ, ಉನ್ನಿ ಕೃಷ್ಣನ್, ರೋಷನ್, ಮಧು ಜವಳಿ, ಜೋಸಿ ಸ್ಯಾಮ್ಯುಯಲ್, ದೀಪಕ್...ಹೀಗೆ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಸಾಗಿದೆ.

1982ರಿಂದ 2000ದವರೆಗೆ ಕ್ರೀಡಾ ಬರಹಗಾರರ ಸಂಘದ ಚುನಾವಣೆ ಮತ್ತು ಕಾರ್ಯಚಟುವಟಿಕೆ ಬಿರುಸಾಗಿ ಸಾಗತ್ತು. 1990ರಲ್ಲಿ ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ(ಎಸ್.ಜೆ.ಎಫ್.ಐ.)ಕ್ಕೆ ನೋಂದಣಿಯಾದ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಅನೇಕ ಬಾರಿ ಅಖಿಲ ಭಾರತ ಮಟ್ಟದ ಕ್ರಿಕೆಟ್ ಟೂರ್ನಿಗಳನ್ನೂ ನಡೆಸಿತು. ಅಷ್ಟೇ ಅಲ್ಲ ಎಸ್.ಜೆ.ಎಫ್.ಐ. ವಾರ್ಷಿಕ ಸಭೆಗಳ ಆತಿಥ್ಯವನ್ನೂ ವಹಿಸಿಕೊಂಡಿತ್ತು. ಆನಂತರ ಚಟುವಟಿಕೆ ಸ್ವಲ್ಪ ಕಡಿಮೆ ಆಗಿದ್ದು ಬೇಸರ. ಆದರೂ ಈಗ ಸಾಕಷ್ಟು ಯುವಕರು "ಸ್ವ್ಯಾಬ್"ನಲ್ಲಿ ಇದ್ದಾರೆ. ಅವರೆಲ್ಲ ಈ ಸಂಘಟನೆಗೆ ಹೊಸ ಚೈತನ್ಯವನ್ನು ನೀಡಲು ಸಾಧ್ಯ.


ಟೆಲಿವಿಷನ್ ಅಬ್ಬರ ಇಲ್ಲದ ಕಾಲದಲ್ಲಿ ಆರಂಭವಾಗಿದ್ದ "ಸ್ವ್ಯಾಬ್"ನಲ್ಲಿ ಆಗ ಟೆಲಿವಿಷನ್ ವರದಿಗಾರರಿಗೆ ಹಾಗೂ ಇಂಟರ್ ನೆಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರೀಡಾ ಪತ್ರಕರ್ತರಿಗೆ ಅವಕಾಶ ನೀಡಬೇಕೆ-ಬೇಡವೇ ಎನ್ನುವ ಸ್ಪಷ್ಟ ಯೋಚನೆ ಮಾಡಿರಲಿಲ್ಲ. 2000ದಿಂದ ಈಚೆಗೆ ಈ ಕುರಿತು ಬಿರುಸಾದ ಚರ್ಚೆ ನಡೆಯುತ್ತ ಬಂದಿದೆ. ಅನೇಕ ಬಾರಿ ಈ ವಿಷಯವು "ಸ್ವ್ಯಾಬ್" ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಯೂ ಆಗಿದೆ. ಆದರೆ ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಅನೇಕ ಬಾರಿ ಹಿರಿಯ ಕ್ರೀಡಾ ಪತ್ರಕರ್ತರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದ್ದರಿಂದ ಆಗಿನಿಂದಲೂ ಈ ವಿಷಯವು ನೆನೆಗುದಿಗೆ ಬಿದ್ದಿದೆ.


ಈಗ ಈ ವಿಷಯವನ್ನು ಮತ್ತೆ ಚರ್ಚೆ ಮಾಡುವುದು ಅಗತ್ಯವಾಗಿದೆ. ಈ ಬಗ್ಗೆ ಹೊಸ ಪ್ರಸ್ತಾವವನ್ನು ತಂದು ಟೆಲಿವಿಷನ್ ಕ್ರೀಡಾ ವರದಿಗಾರರನ್ನು ಪ್ರತ್ಯೇಕವಾದ ಒಂದು ಘಟಕವನ್ನು ಮಾಡಿ "ಸ್ವ್ಯಾಬ್" ಚಟುವಟಿಕೆಗೆ ಪೂರಕವಾಗಿ ಇರುವಂತೆ ಮಾಡಲು ಸಾಧ್ಯವಾಗಬಹುದೇ ಎನ್ನುವುದು ಚರ್ಚೆ ಆಗಬೇಕಾಗಿದೆ. ಅದು ಹೊಸ ತಲೆಮಾರಿನ ಕ್ರೀಡಾ ಪತ್ರಕರ್ತರು ಯೋಚಿಸಿ ತೀರ್ಮಾನ ಕೈಗೊಳ್ಳುವಂಥ ವಿಷಯ. ಆದರೆ ಈಗ ಇರುವ "ಸ್ವ್ಯಾಬ್" ನಿಯಮಗಳ ಪ್ರಕಾರ ಕ್ರೀಡಾ ಬರಹಗಾರರ ಹೊರತಾಗಿ ಬೇರೆಯವರಿಗೆ ಅವಕಾಶವಿಲ್ಲ. ಆದರೆ ಒಂದು ಪೂರಕ ಘಟಕವಾಗಿ ಟೆಲಿವಿಷನ್ ಹಾಗೂ ಇಂಟರ್ ನೆಟ್ಗಳ ಕ್ರೀಡಾ ವರದಿಗಾರರು ಹಾಗೂ ಬರಹಗಾರರನ್ನು ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಲು ಯೋಚಿಸಬಹುದು. ಆದರೆ ಇದಕ್ಕೆ "ಸ್ವ್ಯಾಬ್" ಸರ್ವಸದಸ್ಯರ ಸಭೆಯ ಒಪ್ಪಿಗೆ ದೊರೆಯುವುದು ಅಗತ್ಯವಾಗಿದೆ.


ಇಂಥದೊಂದು ಪ್ರಸ್ತಾವಕ್ಕೆ ಒಪ್ಪಿಗೆ ದೊರೆತರೂ, ಟೆಲಿವಿಷನ್ ಹಾಗೂ ಇಂಟರ್ ನೆಟ್ಗಳ ಕ್ರೀಡಾ ವರದಿಗಾರರು ಹಾಗೂ ಬರಹಗಾರರಿಗೆ "ಸ್ವ್ಯಾಬ್" ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವುದು ಸಾಧ್ಯವಾಗುವುದಿಲ್ಲ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಪ್ರಸ್ತಾವದೊಂದಿಗೆ "ಸ್ವ್ಯಾಬ್" ಚಟುವಟಿಕೆಯ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ಮುಂದಾಗಬಹುದು.


"ಸ್ವ್ಯಾಬ್" ಮಾಜಿ ಅಧ್ಯಕ್ಷನಾದ ನಾನು ಈ ಸಂಘಟನೆಯ ಯಾವುದೇ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಸದಾ ಸಿದ್ಧನಾಗಿರುತ್ತೇನೆ. ಯುವ ಕ್ರೀಡಾ ಪತ್ರಕರ್ತರಿಗೆ "ಸ್ವ್ಯಾಬ್" ಚಟುವಟಿಕೆಯನ್ನು ಹೆಚ್ಚಿಸಲು ನನ್ನ ಬೆಂಬಲ ಯಾವಾಗಲೂ ಇರುತ್ತದೆ.

"ಸ್ವ್ಯಾಬ್" ಎಲ್ಲ ಸದಸ್ಯರಿಗೂ ನಮ್ಮ ಈ ಸಂಘಟನೆಯ 35ನೇ ವರ್ಷಾಚರಣೆಯ ಶುಭಾಶಯಗಳು.

ನಿಮ್ಮ ಮಿತ್ರ
ಎಂ.ಎ.ಪೊನ್ನಪ್ಪ
ಸಹಾಯಕ ಸಂಪಾಕರು (ಕ್ರೀಡೆ), "ಪ್ರಜಾವಾಣಿ" ಕನ್ನಡ ದಿನಪತ್ರಿಕೆ

SHREEKUMAR "SJFI" VICE PRESIDENT

SWAB president S.S.Shreekumar was elected as vice president of the Sports Journalists Federation of India (SJFI). R.Kaushik also from SWAB elected as executive committee member.

The annual general meeting of the SJFI re-elected S. Sabanayakan (Kolkata) as president. also re-elected Chandrasekhar P. Sant (Sports Journalists Association of Mumbai as its treasurer. The other office-bearers are: vice-presidents: A. Vinod (Kerala), Gordon D’costa (Mumbai), S.S.Shreekumar (SWAB) and Alak Ghosh (Tripura); joint-secretary: Subodh M. Barua (Assam); executive committee: G.B.Vanamali (Tamil Nadu), R. Kaushik (SWAB), D. Sampath Kumar (Andhra Pradesh), Vikas Pandey (Indore), Anand Naik and Sanjeev Samyal (Mumbai) and Purnendu Chakraborti (Koltaka).

SOUTH ZONE TRIUMPHS


The South Zone cricket team maintained a clean slate to
win the J.K. Bose T20 tournament.

Courtesy THE HINDU

South Zone won the inter-zonal J.K. Bose Twenty20 cricket tournament, winning its third match at the Sports Authority of Goa (SAG) ground at Campal here on Sunday. South beat North to win the trophy after 12 years.

Abhijit Bhadkar was declared the Man-of-the-Match. West Zone finished runner-up, defeating East Zone at the Panjim Gymkhana ground. South Zone's Satish Viswanathan was declared the Player-of-the-Tournament for his consistent performance with the bat.

Abhijit Kulkarni of the Sports Journalists Association of Mumbai (SJAM) beat R. Kaushik of Sports Writers Association of Bangalore in the men's table tennis final.

Nike, Videocon Mobile Phones and ESPN-STAR Sports sponsored the prizes for cricket, table tennis and penalty kicks.

The scores: North Zone 140 for nine in 20 overs (S. Saxena 38 not out, Mallikacharan three for 31, Abhijit Bhadkar two for 25) lost to South Zone 141 for two in 19 overs (Satish Viswanathan 53).

East Zone 102 in 19.5 overs (T. Talukdar 31, A. Kulkarni two for 15, Rahul Dixit two for 23, S. Mayure two for 11) lost to West Zone 103 for five in 10.5 overs (D. Pandey 23, S. Barua three for 37).

Table Tennis: Men: A. Kulkarni (SJAM) bt R. Kaushik (SWAB) 11-4, 9-11, 11-4, 11-7.

"ಲೆಗ್ ಕ್ರಿಕೆಟ್" ಪ್ರದರ್ಶನ ಪಂದ್ಯದ ಕ್ಷಣಗಳು...!


ರಂಜನೆ ನೀಡುವಂಥ ವಿಶಿಷ್ಟವಾದ
ಕ್ರೀಡೆಯಾದ "ಲೆಗ್ ಕ್ರಿಕೆಟ್"
ಪ್ರದರ್ಶನ ಪಂದ್ಯದ ಕ್ಷಣಗಳು.



ಪಂದ್ಯಕ್ಕೆ ಮುನ್ನ ಆಟದ ಯೋಜನೆ ರೂಪಿಸುವಲ್ಲಿ ತಲ್ಲೀನರಾದ ಆಟಗಾರರು.


ಬೌಂಡರಿಲೈನ್ ಫೀಲ್ಡರ್ ಸುತ್ತ ಟೆಲಿವಿಷನ್ ಚಾನಲ್ಲುಗಳ ಕ್ಯಾಮೆರಾದವರ ಕಣ್ಣು...!


"ಸ್ವ್ಯಾಬ್" ತಂಡದ ವಿರುದ್ಧ ಆಡಿದ ದೈಹಿಕ ಶಿಕ್ಷಣ ಶಿಕ್ಷಕರ ತಂಡ.


"ಸ್ವ್ಯಾಬ್" ಕಾರ್ಯದರ್ಶಿ (ಚುನಾಯಿತ) ಡಿ.ವಿ.ಗರುಡ ಹಾಗೂ ನಾಯಕ ಸುನಿಲ್ ಶಿರಸಂಗಿ
ಅವರು ಟಾಸ್ ಮಾಡಲು ಬಂದ ಕ್ಷಣ.


ಪಂದ್ಯದ ಒಂದು ಕ್ಷಣ...!


ಬೌಂಡರಿ ಆಚೆಗೆ ನಿಂತು ಬೌಲಿಂಗ್ (ಅಂಡರ್ ಆರ್ಮ್ ರೋಲಿಂಗ್) ಹೇಗೆ
ಮಾಡುವುದು ಎಂದು ಚಿಂತನೆ.



ಓ... ರನ್ ಔಟ್ ಆಗುವ ಸಾಧ್ಯತೆ; ಬೇಗ ಚೆಂಡು ಕೊಡಿ...!


ಪಂದ್ಯದಲ್ಲಿ ಗೆದ್ದ "ಸ್ವ್ಯಾಬ್" ತಂಡದ ಆಟಗಾರರು.