ಅದೊಂದು ನೆನಪುಗಳ ಖಜಾನೆ! ಹೌದು. ಒಂದೊಂದೇ ಫೈಲ್ ಹಾಗೂ ಆಲ್ಬಮ್ ಅನ್ನು ತಿರುವಿ ಹಾಕಿದರೆ ಅಲ್ಲಿ ನೆನಪುಗಳ ದೊಡ್ಡ ಬುತ್ತಿಯ ಗಂಟನ್ನು ತೆಗೆದ ಅನುಭವ. ಅಲ್ಲಿದ್ದ ನೆನಪಿನ ಸಂಚಿಕೆಗಳು ಕೂಡ ಸಾಕಷ್ಟು. ಅವೆಲ್ಲವನ್ನೂ ನೋಡಿದಾಗ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ತನ್ನ 35 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಅದೆಷ್ಟೊಂದು ಚಟುವಟಿಕೆಗಳನ್ನು ನಡೆಸಿದೆ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.
ನಾನು "ಸ್ವ್ಯಾಬ್" ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡ ನಂತರ ನನ್ನ ಕೈಯಾರೆ ಸ್ವ್ಯಾಬ್ ಬೀರುವನ್ನು ತೆಗೆದಿದ್ದು ಇಂದು ಅಂದರೆ ಬುಧವಾರ (26ನೇ ಮೇ 2010). ಇದಕ್ಕೂ ಮುನ್ನ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಈಗಿನ ಅಧ್ಯಕ್ಷರಾದ ಶ್ರೀಕುಮಾರ್ ಅವರು ಎರಡು ಬಾರಿ ಪ್ರೆಸ್ ಕ್ಲಬ್ ಕೋಣೆಯ ಒಂದು ಮೂಲೆಯಲ್ಲಿರುವ ಸ್ವ್ಯಾಬ್ ಬೀರುವನ್ನು ತೋರಿಸಿದ್ದರು. "ಹಳೆಯ ಸಾಕಷ್ಟು ದಾಖಲೆಗಳು ಇಲ್ಲಿವೆ; ಒಮ್ಮೆ ನೋಡಿ" ಎಂದು ಶ್ರೀಕುಮಾರ್ ಅವರು ಹೇಳಿದ್ದರು. ಅದಕ್ಕೆ ತಕ್ಕಂತೆ ಸಮಯ ಮಾಡಿಕೊಂಡು ಸುಮಾರು ಮೂರು ತಾಸು ಪ್ರತಿಯೊಂದು ಹಳೆಯ ಫೈಲ್, ಆಲ್ಬಮ್ ಹಾಗೂ ಸ್ಮರಣ ಸಂಚಿಕೆಗಳನ್ನು ನೋಡಿದೆ.
ಅದೊಂದು ಅದ್ಭುತ ಅನುಭವವೇ ಸರಿ. ಏಕೆಂದರೆ ನಾನು ನೋಡಿದ ಅಲ್ಲಿನ ಪ್ರತಿಯೊಂದು ದಾಖಲೆ ಪತ್ರವೂ ಸ್ವ್ಯಾಬ್ ಇತಿಹಾಸವನ್ನು ನನ್ನ ಕಣ್ಣೆದುರು ತೆರೆದು ಇಟ್ಟಿತು. ಆದರೆ ಒಂದಿಷ್ಟು ಬೇಸರವೂ ಆಯಿತು; ಮೂರು ತಾಸು ಪ್ರತಿಯೊಂದು ಫೈಲ್ ಮೇಲೆ ವರ್ಷಗಳ ಕಾಲದಿಂದ ಕುಳಿತಿದ್ದ ದೂಳು ಹಾರಿಸುವ ಕೆಲಸವನ್ನೂ ಮಾಡಬೇಕಾಯಿತು. ಅಷ್ಟೊಂದು ಅಮೂಲ್ಯವಾದ ದಾಖಲೆಗಳನ್ನು ನಾವು ಹೀಗೆ ಇಟ್ಟುಕೊಂಡಿದ್ದೇವಲ್ಲಾ ಎಂದು ಮನಸ್ಸಿಗೆ ಒಂದಿಷ್ಟು ಕಸಿವಿಸಿಯೂ ಆಯಿತು.
ನಮ್ಮ ಹಿರಿಯರು ಸ್ವ್ಯಾಬ್ ಬೆಳವಣಿಗೆಗಾಗಿ ಪಟ್ಟ ಶ್ರಮವನ್ನು ಎತ್ತಿ ತೋರಿಸುವಂತೆ ಅದಕ್ಕೊಂದು ಶೋಕೇಸ್ ಮಾಡಿಸುವ ಅಗತ್ಯವಿದೆ ಎಂದು ಕೂಡ ಅನಿಸಿತು. ಕರ್ನಾಟಕದ ಕ್ರೀಡಾ ಪತ್ರಿಕೋದ್ಯಮದ ಇತಿಹಾಸ ಬರೆದರೆ ಅದಕ್ಕೆ ಪೂರಕವಾಗುವಂತ ಅನೇಕ ಅಂಶಗಳು ಅಲ್ಲಿರುವ ಫೈಲ್ ಹಾಗೂ ಸ್ಮರಣ ಸಂಚಿಕೆಯಲ್ಲಿ ದಾಖಲಾಗಿವೆ. ವಿಶೇಷವಾದ ಲೇಖನಗಳನ್ನು ಕೂಡ ಆ ಸ್ಮರಣ ಸಂಚಿಕೆಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಸ್ವ್ಯಾಬ್ ಬೆಳವಣಿಗೆಗಾಗಿ ಬೆವರು ಸುರಿಸಿದ ಎಲ್ಲರ ನೆನಪು ಕೂಡ ಆ ದಾಖಲೆ ಪತ್ರಗಳಲ್ಲಿ ಅಡಗಿದೆ.
ಅಲ್ಲಿ ದೊರೆತಿರುವ ಎಲ್ಲ ವಿಷಯಗಳನ್ನು ಚುಟುಕಾಗಿ ಹೇಳುವುದು ಕಷ್ಟ. ಆದ್ದರಿಂದ ಅವುಗಳನ್ನು ತಮ್ಮ ಮುಂದೆ ಸರಣಿಯಾಗಿ ಹರಿಬಿಡುವುದು ನನ್ನ ಉದ್ದೇಶ. ಅಷ್ಟೇ ಅಲ್ಲ "ಸ್ವ್ಯಾಬ್ ನೆನಪಿನ ಖಜಾನೆ"ಯಂತೆ ಇರುವ ಪ್ರೆಸ್ ಕ್ಲಬ್ ಕೋಣೆಯಲ್ಲಿನ ಬೀರುನಲ್ಲಿ ಸಂಗ್ರಹವಾಗಿರುವ ಆಲ್ಬಮ್ ಒಳಗಿರುವ ಅನೇಕ ಚಿತ್ರಗಳನ್ನು ತಮ್ಮ ಮುಂದೆ ಇಡುವ ಪ್ರಯತ್ನವನ್ನು ಇದೇ ಬ್ಲಾಗ್ ಮೂಲಕ ಮಾಡಲು ಯತ್ನಿಸುತ್ತೇನೆ. ಜೊತೆಗೆ ಹಳೆಯ ನೆನಪಿನ ಸಂಚಿಕೆಗಳಲ್ಲಿನ ಲೇಖನಗಳನ್ನು ತಮ್ಮ ಮುಂದೆ ಯಥಾವತ್ತಾಗಿ ಇಡುವ ಪ್ರಯತ್ನವನ್ನೂ ಮಾಡಲಾಗುವುದು.

-ಡಿ.ವಿ. ಗರುಡ