"ಸ್ವ್ಯಾಬ್" ಸದಸ್ಯರಾದ ಅಭಿಷೇಕ್ ಭಾಡ್ಕರ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ತಂಡದವರು ಪಣಜಿಯಲ್ಲಿ ಎಸ್.ಜೆ.ಎಫ್.ಐ. ಆಶ್ರಯದಲ್ಲಿ ನಡೆಯುತ್ತಿರುವ ಜೆ.ಕೆ.ಬೋಸ್ ಟ್ವೆಂಟಿ-20 ಕ್ರಿಕೆಟ್ ಟೂನರ್ಿಯ ಮೊದಲ ಪಂದ್ಯದಲ್ಲಿ ಗೆದ್ದು, ಶುಭಾರಂಭ ಮಾಡಿದ್ದಾರೆ.
ಗೋವಾ ಕ್ರೀಡಾ ಪ್ರಾಧಿಕಾರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ವಲಯ 26 ರನ್ನುಗಳಿಂದ ಪಶ್ಚಿಮ ವಲಯ ತಂಡವನ್ನು ಸೋಲಿಸಿತು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ವಲಯ: 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 (ಸತೀಶ್ ವಿಶ್ವನಾಥ್ 41, ಆರ್.ಕೌಶಿಕ್ 35, ಅಭಿಷೇಕ್ ಭಾಡ್ಕರ್ 45); ಪಶ್ಚಿಮ ವಲಯ: 20 ಓವರ್ಗಳಲ್ಲಿ 7 ವಿಕೆಟ್ಗೆ 137 (ಅಭಿಷೇಕ್ ಭಾಡ್ಕರ್ 10ಕ್ಕೆ2); ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ 26 ರನ್ನುಗಳ ಜಯ.