"ಸ್ವ್ಯಾಬ್" ಜೊತೆಗೆ ಸದಾ ನಿಂತ ಪೊನ್ನಪ್ಪ






"ಪ್ರಜಾವಾಣಿ"ಯಲ್ಲಿ ಈಗ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಂ.ಎ. ಪೊನ್ನಪ್ಪ ಅವರು ಮೂವತ್ತೈದು ವರ್ಷಗಳ ಕಾಲದಿಂದಲೂ "ಸ್ವ್ಯಾಬ್" ಜೊತೆಗೆ ಇದ್ದು ಇದರ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡು ಬಂದವರು. ಅಷ್ಟೇ ಅಲ್ಲ ಈ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಇದ್ದುಕೊಂಡು ಅನೇಕ ಚಟುವಟಿಕೆಗಳನ್ನು ಆಯೋಜಿಸಿದವರು. ಪೊನ್ನಪ್ಪ ಹಾಗೂ "ಸ್ವ್ಯಾಬ್" ಜೊತೆಗಿನ ನಂಟು ಎಂಥದು ಎನ್ನುವುದಕ್ಕೆ ಇಲ್ಲಿರುವ ಕೆಲವು ಚಿತ್ರಗಳೇ ಸಾಕ್ಷಿ.