ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ತಂಡವು 1-2ರಲ್ಲಿ ಮುಂಬೈ ಎದುರು ಸೋಲನುಭವಿಸಿತು. ಆರ್.ಕೌಶಿಕ್ ಅವರು ಉತ್ತಮ ಆಟವಾಡಿದರೂ, ಸಿಂಗಲ್ಸ್ ಪಂದ್ಯದಲ್ಲಿ ಗ್ದೆದು, ಡಬಲ್ಸ್ ಪಂದ್ಯದಲ್ಲಿ ನಿರಾಸೆ ಹೊಂದಿದರು.
ಕೌಶಿಕ್ 11-5, 11-6ರಲ್ಲಿ ಗೊರ್ಡಾನ್ ಡಿಕೊಸ್ಟಾ ವಿರುದ್ಧ ಸಿಂಗಲ್ಸ್ ಹಣಾಹಣಿಯಲ್ಲಿ ಯಶ ಪಡೆದರು. ಆದರೆ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಮಲ್ಲಿಕಾಚರಣ್ ಅವರು 9-11, 7-11ರಲ್ಲಿ ಪ್ರದೀಪ್ ವಿಜಯಕರ್ ಎದುರು ನಿರಾಸೆ ಹೊಂದಿದರು. ನಿರ್ಣಾಯಕ ಎನಿಸಿದ ಡಬಲ್ಸ್ ಪಂದ್ಯದಲ್ಲಿ ಮುಂಬೈನ ಗೊರ್ಡಾನ್ ಮತ್ತು ಅಭಿಜಿತ್ ಕುಲಕರ್ಣಿ ಜೋಡಿಯು ಕೌಶಿಕ್ ಹಾಗೂ ಮಲ್ಲಿಕಾಚರಣ್ ಅವರನ್ನು ಸೋಲಿಸಿತು.
ಇಎಸ್ಪಿಎನ್ ಪೆನಾಲ್ಟಿ ಕಿಕ್ ಸ್ಪರ್ಧೆಯ ಫೈನಲ್ ಹಂತದಲ್ಲಿಯೂ ಮುಂಬೈ ತಂಡವು 4-1ರಲ್ಲಿ ಬೆಂಗಳೂರಿನ ತಂಡವನ್ನು ಪರಾಭವಗೊಳಿಸಿತು. ಮೂರನೇ ಸ್ಥಾನವನ್ನು ದೆಹಲಿ ಪಡೆದುಕೊಂಡಿತು.