ಜೆ.ಕೆ. ಬೋಸ್ ಟ್ರೋಫಿಗೆ ಬೆಂಗಳೂರು ಕ್ರೀಡಾ ವರದಿಗಾರರು

ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ(ಎಸ್.ಜೆ.ಎಫ್.ಐ.)ವು ಈ ಬಾರಿಯ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಗೋವಾದಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ (ಇದೇ ವಾರ) ಆಯೋಜಿಸುತ್ತಿದೆ. ಇದಕ್ಕಾಗಿ ರಚಿಸಲಾಗಿರುವ ದಕ್ಷಿಣ ವಲಯ ತಂಡದಲ್ಲಿ ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ ಐವರು ಸದಸ್ಯರು ಆಯ್ಕೆಯಾಗಿದ್ದಾರೆ.

ಆರ್. ಕೌಶಿಕ್ (ಡೆಕ್ಕನ್ ಹೆರಾಲ್ಡ್), ಸತೀಶ್ ವಿಶ್ವನಾಥ್ (ಟೈಮ್ಸ್ ಆಫ್ ಇಂಡಿಯಾ), ಮೈಲಾರಲಿಂಗ ದಿಂಡಲಕೊಪ್ಪ (ವಿಜಯ ಕರ್ನಾಟಕ), ಅಭಿಷೇಕ್ ಬಾಡ್ಕರ್ (ಡೆಕ್ಕನ್ ಕ್ರಾನಿಕಲ್) ಹಾಗೂ ಮಲ್ಲಿಕಾರ್ಜುನ್ ಚರಣವಾಡಿ (ಉದಯವಾಣಿ) ಅವರು ದಕ್ಷಿಣ ವಲಯವನ್ನು ಪ್ರತಿನಿಧಿಸಲಿರುವ "ಸ್ವ್ಯಾಬ್" ಸದಸ್ಯರು.

ಈ ಐವರು ಸ್ವ್ಯಾಬ್ ಸದಸ್ಯರು ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ದಕ್ಷಿಣ ವಲಯ ತಂಡದ ಶ್ರೇಯವನ್ನು ಹೆಚ್ಚಿಸಲಿ ಎಂದು "ಸ್ವ್ಯಾಬ್" ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಹಾರೈಸುತ್ತೇವೆ.

ಎಸ್.ಜೆ.ಎಫ್.ಐ. ಪ್ರತಿ ವರ್ಷವೂ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಾ ಬಂದಿದೆ. ಅದರಲ್ಲಿ ದಕ್ಷಿಣ ವಲಯ ತಂಡವನ್ನು "ಸ್ವ್ಯಾಬ್" ಸದಸ್ಯರು ಪ್ರತಿನಿಧಿಸುತ್ತಾ ಬಂದಿದ್ದಾರೆ. ನಮ್ಮ ಅನೇಕ ಸದಸ್ಯರು ಉತ್ತಮ ಪ್ರದರ್ಶನದಿಂದ ಮೆಚ್ಚುಗೆ ಕೂಡ ಗಳಿಸಿದ್ದಾರೆ.

ಬೆಂಗಳೂರಿನಲ್ಲಿ ಇರುವ ಎಲ್ಲ ಪ್ರಮುಖ ಪತ್ರಿಕೆಗಳ ಕ್ರೀಡಾ ವರದಿಗಾರರಿಗೆ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದು "ಸ್ವ್ಯಾಬ್" ಪ್ರಯತ್ನವಾಗಿದೆ. ಆದರೆ ಎಸ್.ಜೆ.ಎಫ್.ಐ. ನೀಡಿರುವ ಕೋಟಾದಂತೆ ನಾವು ನಮ್ಮ ಪ್ರತಿನಿಧಿಗಳ ಸಂಖ್ಯೆಯನ್ನು ಮಿತಿಗೊಳಿಸಬೇಕಾಗುತ್ತದೆ. ಆದ್ದರಿಂದ ರೊಟೇಷನ್ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆ ಪ್ರಕಾರ ಪ್ರತಿಯೊಂದು ವರ್ಷವೂ ಆಟಗಾರರನ್ನು ಕೆಲವು ಪತ್ರಿಕೆಗಳಿಂದ ಆಯ್ಕೆ ಮಾಡಲಾಗುತ್ತದೆ.

ಮುಂದೆಯೂ ಈ ನಿಯಮವನ್ನು ಅನ್ವಯಿಸಿಕೊಂಡು ಪ್ರತಿಯೊಂದು ವರ್ಷವೂ ಆಯ್ದ ಕೆಲವು ಪತ್ರಿಕೆಗಳ ಕ್ರೀಡಾ ವರದಿಗಾರರಿಗೆ ಮಾತ್ರ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ರೊಟೇಷನ್ ಪ್ರಕಾರ ಆಯ್ಕೆ ಮಾಡುವ ಪತ್ರಿಕೆಗಳಿಂದ ಒಂದು ವೇಳೆ ಯಾರಾದರೂ ಆಡಲು ಹೋಗುವುದಿಲ್ಲ ಎಂದು ತಿಳಿಸಿದ ಸಂದರ್ಭದಲ್ಲಿ ಮಾತ್ರ ಬೇರೆಯವರಿಗೆ ಆ ಸ್ಥಾನದಲ್ಲಿ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಕ್ಕೆ ಕಳುಹಿಸಲಾಗುವುದು.

ರೊಟೇಷನ್ ಪದ್ಧತಿ ವಿಷಯದಲ್ಲಿ ಯಾವುದೇ ಆಕ್ಷೇಪಗಳಿಗೆ ಅವಕಾಶವಿಲ್ಲ. ಏಕೆಂದರೆ ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವುದು "ಸ್ವ್ಯಾಬ್" ಆಶಯ. ಆದ್ದರಿಂದ ತಾವೆಲ್ಲರೂ ಈ ವಿಷಯವನ್ನು ಸಹೃದಯರಾಗಿ ಸ್ವೀಕರಿಸಬೇಕು ಹಾಗೂ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿ ಆಡಲು ಹೋಗುವ ನಮ್ಮ ಮಿತ್ರರಿಗೆ ಶುಭ ಹಾರೈಸಬೇಕಾಗಿ ವಿನಂತಿ.