ಶುಭಹಾರೈಕೆಗಳು

ಪತ್ರಕರ್ತ ಮಿತ್ರರನ್ನು ಸ್ನೇಹದ ಬಂಧನದಲ್ಲಿ ಬೆಸೆಯುವುದಕ್ಕೆ ಹಾಗೂ ಪತ್ರಿಕಾ ಚಟುವಟಿಕೆಗಳಿಗೆ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿರುವ ಬೆಂಗಳೂರು ಪ್ರೆಸ್ ಕ್ಲಬ್ ಎಂದರೆ ಪತ್ರಕರ್ತ ಮಿತ್ರರಿಗೆ ಆತ್ಮೀಯ ತಾಣ. ಇಂಥದೊಂದು ಉಲ್ಲಾಸಯುತ ವಾತಾವರಣ ಕಲ್ಪಿಸಲು ನೆಲೆಕಂಡುಕೊಂಡು, ತಲೆಯೆತ್ತಿನಿಂತ ಬೆಂಗಳೂರು ಪ್ರೆಸ್ ಕ್ಲಬ್ ಗೆ ಈಗ 40 ವರ್ಷಗಳ ಸಂಭ್ರಮದ ಹರ್ಷ. ಈ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ಬಿನ ಎಲ್ಲ ಸದಸ್ಯರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಪರವಾಗಿ ಶುಭಹಾರೈಕೆಗಳು.