ಬೆಂಗಳೂರು: ಮೂವತ್ತೈದನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ ಆಶ್ರಯದಲ್ಲಿ ಜೂನ್ 12 (ಭಾನುವಾರ)ರಂದು ಕ್ರೀಡಾ ಪತ್ರಕರ್ತರು ಹಾಗೂ ಛಾಯಾಗ್ರಾಹಕರಿಗಾಗಿ ಸ್ನೂಕರ್ ಚಾಂಪಿಯನ್ ಷಿಪ್ ಆಯೋಜಿಸಲಾಗಿದೆ.
ಬೆಂಗಳೂರು ವಿಹಾರ ಕೇಂದ್ರ (ಬಿವಿಕೆ) ಹಾಗೂ ಕದಿರೇನಹಳ್ಳಿ ಕ್ರಾಸ್ ಸ್ನೂಕರ್ ಪಾಯಿಂಟ್ ಸಹಯೋಗದಲ್ಲಿ ಉದ್ಯಾನನಗರಿಯಲ್ಲಿ ನಡೆಯಲಿರುವ ಈ ಚಾಂಪಿಯನ್ ಷಿಪ್ ನಲ್ಲಿ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಲ್ವತ್ತಕ್ಕೂ ಹೆಚ್ಚು ಕ್ರೀಡಾ ವರದಿಗಾರರು ಹಾಗೂ ಛಾಯಾಗ್ರಾಹಕರು ಪಾಲ್ಗೊಳ್ಳಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿವಿಕೆ ಗೌರವ ಕಾರ್ಯದರ್ಶಿ ಜೆ.ಅಪ್ಪಾಜಿ ಹಾಗೂ ಸ್ನೂಕರ್ ಪಾಯಿಂಟ್ ಕಾರ್ಯದರ್ಶಿ ಮಂಜುನಾಥ್ ಅವರು ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳುವರು ಎಂದು ಸ್ವ್ಯಾಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.