"ಪಿ.ಆರ್.ವಿ" ಮೊಗದಲ್ಲಿ ಮಂದಹಾಸ

ಸುಮಾರು ಒಂದು ತಾಸು ಎದ್ದು ಕುಳಿತು ಮಾತನಾಡಿದರು ನಮ್ಮ "ಸ್ವ್ಯಾಬ್" ಹಿರಿಯ ಸದಸ್ಯರೂ ಆಗಿರುವ ಅನುಭವಿ ಕ್ರೀಡಾ ವರದಿಗಾರ "ಪಿ.ಆರ್.ವಿ" (ಪಿ.ಆರ್. ವಿಶ್ವನಾಥ್). ಈ ನಡುವೆ ಅವರ ಹೆಂಡತಿ ಮಾತನಾಡಿ ಹಾಸ್ಯಕ್ಕೆ ಎನ್ನುವಂತೆ ಹೇಳಿದರು "ಎರಡು ನಿಮಿಷ ಎದ್ದು ಕೂರಿಸಿದರೆ ಮಲಗುತ್ತೇನೆ ಎಂದು ಹೇಳುತ್ತೀರಾ. ಇವತ್ತು ಎಷ್ಟೊಂದು ಹೊತ್ತು ಎದ್ದು ಕುಳಿತುಕೊಂಡಿರಿ?" ಎಂದು. ಆಗ ಪಿ.ಆರ್.ವಿ ಮೊಗದ ತುಂಬಾ ಮಂದಹಾಸವು ಅಂದದಿಂದ ಅರಳಿತು. "ಇಂಥ ಪರಿಸ್ಥಿತಿಯಲ್ಲಿ ಗೆಳೆಯರು ಬಂದು ಮಾತನಾಡಿದರೆ ಸಂತಸವಾಗುತ್ತದೆ. ಸೈಕಾಲಾಜಿಕಲ್ ಆಗಿ ಎನರ್ಜಿ ಸಿಕ್ಕಂತೆ ಆಗುತ್ತದೆ" ಎಂದು ಹೇಳಿ ನಕ್ಕರು.

ಹೌದು; ಸ್ವಾಬ್ ಪರವಾಗಿ ಸಣ್ಣದೊಂದೊ ನೆರವು (25,000 ರೂಪಾಯಿ ಚೆಕ್) ನೀಡುವ ಉದ್ದೇಶದಿಂದ "ಪಿ.ಆರ್.ವಿ" ಮನೆಗೆ ಹೋಗಿದ್ದಾಗ ಅವರಿಗೆ ಎಲ್ಲಿಲ್ಲದ ಸಂತಸ. ಎದ್ದು ಕೂರಿಸು ಎಂದು ತಮ್ಮ ಪತ್ನಿಗೆ ಹೇಳಿದರು. ಉತ್ಸಾಹದಿಂದ ಎದ್ದು ಕುಳಿತ ಅವರು ಸ್ವ್ಯಾಬ್ ಪರವಾಗಿ ನೆರವಿನ ಚೆಕ್ ನೀಡಲು ಬಂದಿದ್ದ "ಪ್ರಜಾವಾಣಿ" ಸಹ ಸಂಪಾದಕರಾದ ಗೋಪಾಲಕೃಷ್ಣ ಹೆಗಡೆ, "ಬೆಂಗಳೂರು ಮಿರರ್" ಪತ್ರಿಕೆಯ ಬೆಂಗಳೂರು ಆವೃತ್ತಿಯ ಕ್ರೀಡಾ ವಿಭಾಗದ ಮುಖ್ಯಸ್ಥ ಸತೀಶ್ ಪಾಲ್ ಹಾಗೂ "ಸ್ವ್ಯಾಬ್" ಕಾರ್ಯದರ್ಶಿ ಡಿ.ವಿ.ಗರುಡ ಅವರ ಕುಶಲೋಪರಿ ವಿಚಾರಿಸಿದರು.


"ಮೊದಲು ತಿಂಡಿ ತಗೊಳ್ಳಿ. ನಾನು ಬೇಗನೇ ತಿಂಡಿ ತಿಂದಾಗಿದೆ. ವೈದ್ಯರು ಹೇಳಿದಂತೆ ತಿಂಡಿ-ಊಟ ಎಲ್ಲವೂ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕಲ್ಲಾ!" ಎಂದು ಮತ್ತೆ ಮುಖ ಅರಳಿಸಿ ನಕ್ಕರು.

ಸ್ವ್ಯಾಬ್ ನೀಡಿದ ಆರ್ಥಿಕ ನೆರವಿಗೆ ಕೃತಜ್ಞತೆ ಸಲ್ಲಿಸಿದ ಅವರು "ಈ ನೆಪದಲ್ಲಿ ನೀವೆಲ್ಲಾ ಬಂದಿರಲ್ಲಾ ಅದೇ ದೊಡ್ಡ ಸಂತಸ. ಹೀಗೆ ಗೆಳೆಯರು ಬರುತ್ತಿದ್ದರೆ ನನಗೂ ಎನರ್ಜಿ ಬಂದಹಾಗಿ ಆಗುತ್ತದೆ" ಎಂದು ಹೇಳಿದರು.

ಹಾಗೆ ಸಾಕಷ್ಟು ಹೊತ್ತು ಮಾತನಾಡಿದ ಅವರು ಬೆಂಗಳೂರಿನಲ್ಲಿ ಹಿಂದೆ ಕ್ರೀಡಾ ವರದಿಗಾರ ನಡುವೆ ಇದ್ದ ಪರಿವಾರದಂಥ ವಾತಾವರಣವನ್ನು ಸ್ಮರಿಸಿದರು. ಜಗಳಗಳು ಇರುತ್ತಿದ್ದವು ಆದರೆ ಅವೆಲ್ಲ ಮನೆಯೊಳಗಿನವು ಎನ್ನುವಂಥವು. ಬೇಗ ಮರೆತು ಹೋಗುತ್ತಿದ್ದವು ಎಂದು ಹಳೆಯ ಹತ್ತಾರು ನೆನಪುಗಳನ್ನು ಮೆಲುಕುಹಾಕಿದರು.

ದೈಹಿಕವಾಗಿ ಸಾಕಷ್ಟು ಕೃಶರಾಗಿರುವ "ಪಿ.ಆರ್.ವಿ" ಅವರಲ್ಲಿನ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಗೆಳೆಯರು ಬಂದರೆ ಸಾಕು ಒಂದಿಷ್ಟು ಹೊತ್ತು ಮಾತನಾಡಬಹುದಲ್ಲ ಎನ್ನುವ ಸಂಭ್ರಮ ಅವರದ್ದು. ಮಾತಿನ ನಡುವೆ ಎಂ.ಎ.ಪೊನ್ನಪ್ಪ, ಆರ್.ಕೌಶಿಕ್, ರವಿ ಚಕ್ರವತರ್ಿ... ಹೀಗೆ ಎಲ್ಲರನ್ನೂ ನೆನಪಿಸಿಕೊಂಡರು. ಬೇರೆ ಬೇರೆ ಪತ್ರಿಕೆಗಳಲ್ಲಿ ಈಗ ಕ್ರೀಡಾ ವಿಭಾಗದಲ್ಲಿ ಯಾರ್ಯಾರು ಇದ್ದಾರೆ ಹೇಗಿದೆ ವಾತಾವರಣ ಎಂದೆಲ್ಲ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು.

ತಾವು ಕೆಲವು ಸಮಯದಿಂದ ಹಾಸಿಗೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಬೇಸರ ಅವರಿಗೆ ಗೆಳೆಯರಿಂದ ದೂರವಾಗಿದ್ದರಿಂದ ಆಗಿದೆ. ಆದ್ದರಿಂದಲೇ ಅವರು "ಆಗಾಗ ನೀವೆಲ್ಲ ಬಂದು ಹೋಗುತ್ತಿರಿ. ನನಗೂ ಒಂದಿಷ್ಟು ಎನಜರ್ಿ ಸಿಕ್ಕಂತೆ ಆಗುತ್ತದೆ" ಎಂದು ಹೇಳಿದರು "ಪಿ.ಆರ್.ವಿ" ಅವರು ಸ್ವ್ಯಾಬ್ ಪರವಾಗಿ ಬಂದಿದ್ದ ಗೋಪಾಲಕೃಷ್ಣ ಹೆಗಡೆ, ಸತೀಶ್ ಪಾಲ್ ಹಾಗೂ ಡಿ.ವಿ.ಗರುಡ ಅವರನ್ನು ಬೀಳ್ಕೊಡುವ ಮುನ್ನ "ನಾನೇ ಗೇಟ್ ವರೆಗೆ ಬಂದು ಬಿಡಬೇಕು ಎನಿಸುತ್ತಿದೆ" ಎಂದು ಹೇಳಿ ನಕ್ಕರು. ಬೇರೆಯವರ ನೆರವಿನೊಂದಿಗೆ ಎದ್ದು ಕುಳಿತುಕೊಳ್ಳುವಂಥ ಸ್ಥಿತಿಯಲ್ಲಿ ಇದ್ದರೂ "ಪಿ.ಆರ್.ವಿ" ಎಷ್ಟೊಂದು ಉತ್ಸಾಹವನ್ನು ಕಾಯ್ದುಕೊಂಡಿದ್ದಾರೆ ಎನ್ನುವುದಕ್ಕೆ ಈ ಮಾತೇ ಸಾಕ್ಷಿ!

ಗೆಳೆಯರೆ ನಿಮಗೂ ಯಾವತ್ತಾದರೂ ಬಿಡುವಿನ ಸಮಯ ಇದ್ದರೆ "ಪಿ.ಆರ್.ವಿ" ಅವರ ಮನೆಗೆ ಹೋಗಿ ಒಂದಿಷ್ಟು ಹೊತ್ತು ಮಾತನಾಡಿಕೊಂಡು ಬನ್ನಿ. ಇದರಿಂದ ನಿಮ್ಮ ಜ್ಞಾನಭಂಡಾರ ವೃದ್ಧಿ ಆಗುತ್ತದೆ; ಜೊತೆಗೆ "ಪಿ.ಆರ್.ವಿ" ಅವರಿಗೂ ಒಂದಿಷ್ಟು ಎನರ್ಜಿ ನೀಡಿದಂತೆ ಆಗುತ್ತದೆ.