A PROUD AND PASSIONATE SCRIBE

RAJAN BALA


By: P.R. VISWANATHAN

Rajan Bala and I became good friends on our first meeting itself. That was in Jan 1967 during the India-West Indies cricket Test match in Chennai. It was certainly not a tale of ‘love at first sight’ between two cub reporters. I can, however, say that there was mutual admiration during that first week of our friendship and it lasted for 42 long years without a spell of misunderstanding.

In 2009 we both thought that our friendship might as well celebrate golden jubilee. Rajan said, “Oh. Eight more years! If it happens, we must celebrate it in a grand manner. Hope one us do not get run out.” And he passed away in September perhaps with the idea of celebration looming large on his mental screen.

After that 1967 meeting, Rajan and I used to meet only once in a blue moon depending on our respective assignments. After all, he was based in Kolkata and me in Chennai. But the erratic frequency of our meetings did not keep our minds away. In 1973 I joined The Hindu Bangalore, and, in 1976-77 Rajan joined The Hindu Chennai. That brought us closer.

When Rajan joined Deccan Herald Bangalore in 1980, we started meeting each other on a daily basis. The period 1980-84 saw the best moments of our friendship. Then Rajan left for Chennai (Indian Express) and then to Mumbai (Indian Express) and so our meeting too became rare. But the mutual admiration and affection did not diminish.

Rajan was back in Bangalore in 1998-99 once and for all. He always loved Bangalore. And God was kind enough to see that Rajan breathed his last in this city! Rajan loved Bangalore mainly because the Bangalore Sports journalists reserved a soft corner for him.

During our one-to-one meetings, Rajan used to become emotional whenever we spoke about Bangalore and its sports journalists. “No one loves me as honestly and instinctively as them.” Perhaps Rajan, who has worked in as many Indian cities as possible, would not have found a set of friends as affectionate and considerate as his friends in his favourite city.

While Bangalore sports scribes saw the “MAN” in Rajan Bala, most others might have seen only the “journalist” in Rajan Bala. That must be the reason for Rajan’s love for Bangalore. Rajan often used to recall the “remarkable gesture” shown by the Bangalore sports journalists in 1980. Before he could complete his first year with Deccan Herald the SWAB made him its president. That was mainly because of the fact that Rajan was heading the “largest” sports department in the state.

Rajan enjoyed that ‘decoration’ as there was little or no opposition to that choice. SWAB, no doubt, had better and more popular personalities to be its president. But then SWAB members were matured enough to appreciate the status of Rajan, the sports editor of Karnataka’s prestigious newspaper. Rajan remained grateful to SWAB throughout.

When he settled down in Bangalore in late 1990s Rajan strengthened his relationship with SWAB and its members. Rajan, a journalist with a wonderful work-culture, will ever be remembered as one of the finest cricket writers Indian has ever produced. He was so passionate when it comes to cricket and cricketers. There is indeed a child in all adult male and female. I had often seen the ‘child’ in Rajan Bala. That child made me admire Rajan more than anything else.

P.R. VISWANATHAN

ಸ್ವ್ಯಾಬ್ ಬೆಳವಣಿಗೆಗೆ ಶ್ರಮಿಸಿದ ಗೋಪಾಲ ಹೆಗಡೆ







ಸ್ವ್ಯಾಬ್ ಬೆಳವಣಿಗೆಗೆ ಶ್ರಮಿಸಿದ ಗೋಪಾಲ ಹೆಗಡೆ

ನೇರ ಹಾಗೂ ದಿಟ್ಟ ಮಾತಿನ ಶ್ರೀ. ಗೋಪಾಲ ಹೆಗಡೆ ಅವರು ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಬೆಳವಣಿಗೆಯಲ್ಲಿ ಶ್ರಮಿಸಿದ ಮಹನೀಯರಲ್ಲಿ ಒಬ್ಬರು. "ಸ್ವ್ಯಾಬ್" ತನ್ನ 35ನೇ ವರ್ಷದ ಸಂಭ್ರಮದಲ್ಲಿ ಇರುವ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಅಗತ್ಯವಾಗಿದೆ.

"ಸ್ವ್ಯಾಬ್" ವಿವಿಧ ಪದಾಧಿಕಾರಿ ಸ್ಥಾನಗಳಲ್ಲಿ ಇದ್ದು ಅವರು ಈ ನಮ್ಮ ಕ್ರೀಡಾ ಬರಹಗಾರರ ಸಂಘದ ಬೆಳವಣಿಗೆಗೆ ತಮ್ಮ ಶ್ರಮದ ಬೆವರು ನೀರನ್ನು ಎರೆದಿದ್ದಾರೆ. ಈ ಸಂಘದ ನೆನಪುಗಳ ಬುತ್ತಿಯನ್ನು ಬಿಚ್ಚಿದರೆ ಗೋಪಾಲ ಹೆಗಡೆ ಅವರು ಪಟ್ಟಿರುವ ಶ್ರಮ ಎಷ್ಟೊಂದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

"ಸಹಕಾರ"-"ಅಸಹಕಾರ" ಏನೇ ಇರಲಿ; ತಾವು ಅಂದುಕೊಂಡದ್ದನ್ನು ಮಾಡಿ ತೋರಿಸುವ ಛಲವನ್ನು ತೋರಿದವರು ಗೋಪಾಲ ಹೆಗಡೆ. ಅವರ ನೇರ ಮಾತುಗಳ ಕೆಲವೊಮ್ಮೆ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗೆಂದು ಅವರೆಂದೂ ತಮ್ಮ ದಿಟ್ಟ ನುಡಿಯನ್ನು ಹಿಂದಕ್ಕೆ ತೆಗೆದುಕೊಂಡವರಲ್ಲ. ಅವರ ದಿಟ್ಟ ಮಾತುಗಳು ಸ್ವ್ಯಾಬ್ ಹಿತಕ್ಕಾಗಿ ಆಡಿದವಾಗಿರುತ್ತಿದ್ದವು. ಆದ್ದರಿಂದ ಅವರು ತಮ್ಮ ನಿರ್ಣಯಗಳಿಗೆ ಅಂಟಿಕೊಂಡು ಗಟ್ಟಿಯಾಗಿ ನಿಂತವರು.

ಎಂಬತ್ತು ಹಾಗೂ ತೊಂಬತ್ತರ ದಶಕದಲ್ಲಿ ಗೋಪಾಲ ಹೆಗಡೆ ಅವರು ಕ್ರೀಡಾ ಬರಹಗಾರರ ಸಂಘದ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ವೃತ್ತಿ ಚಟುವಟಿಕೆಗೆ ಒಂದಿಷ್ಟೂ ತೊಡಕಾಗದಂತೆಯೇ ಅವರು ಸ್ವ್ಯಾಬ್ ಚಟುವಟಿಕೆಗಳಿಗೂ ಸಮಯವನ್ನು ವಿನಿಯೋಗಿಸಿದವರು.

ಆದ್ದರಿಂದಲೇ ನಾನಿಲ್ಲಿ ಒಬ್ಬ ಹಿರಿಯ ಕ್ರೀಡಾ ಪತ್ರಕರ್ತರು ಗೋಪಾಲ ಹೆಗಡೆ ಅವರ ಬಗ್ಗೆ ಆಡಿದ ಮಾತನ್ನು ಸ್ಮರಿಸಲು ಇಷ್ಟಪಡುತ್ತೇನೆ. "ಗೋಪಾಲ ಅಂದರೆ ಅವನು ಯಾವುದೇ ಕೆಲಸದಲ್ಲಿ ದೈತ್ಯ. ಎಲ್ಲವನ್ನೂ ಮಾಡಿ ಮುಗಿಸುತ್ತಾನೆ. ತಾನು ಅಂದುಕೊಂಡಿದ್ದನ್ನು ಮುಗಿಸುವವರೆಗೆ ಅವನು ನಿಲ್ಲುವುದೇ ಇಲ್ಲ; ಆ ಕೆಲಸ ಮುಗಿಯುವವರೆಗೆ ಚಡಪಡಿಸುತ್ತಾನೆ. ಒಮ್ಮೆ ಆ ಕೆಲಸ ಮುಗಿದ ಮೇಲೆ ಮತ್ತೊಂದರ ಬೆನ್ನು ಹತ್ತುತ್ತಾನೆ" ಎಂದು ಆ ಹಿರಿಯ ಕ್ರೀಡಾ ಪತ್ರಕರ್ತರು ಹೇಳಿದ್ದರು.

ನಿಜವಾಗಿಯೂ ಈ ಮಾತು ಗೋಪಾಲ ಹೆಗಡೆ ಅವರ ಕಾರ್ಯದಕ್ಷತೆ ಹಾಗೂ ಕೆಲಸ ಮಾಡುವ ಉತ್ಸಾಹವನ್ನು ಬಿಂಬಿಸುತ್ತದೆ. ಸ್ವ್ಯಾಬ್ ಬಗ್ಗೆ ಈಗಲೂ ಕಳಕಳಿಯಿಂದ ಮಾತನಾಡುತ್ತಾರೆ ಹೆಗಡೆ ಅವರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾಗಿ ಹೋದರೂ, ಅವರು ಸ್ವ್ಯಾಬ್ ಚಟುವಟಿಕೆಗಳ ಜೊತೆಗೆ ತಮ್ಮ ನಂಟು ಉಳಿಸಿಕೊಳ್ಳಲು ಸದಾ ಪ್ರಯತ್ನ ಮಾಡಿದ್ದಾರೆ. ಈಗಲೂ ಸ್ವ್ಯಾಬ್ ವಿಷಯವನ್ನು ಎತ್ತಿದರೆ ಹಲವಾರು ಇತಿಹಾಸದ ಪುಟಗಳನ್ನು ತೆರೆದಿಡುತ್ತಾರೆ.

ಸ್ವ್ಯಾಬ್ ಕ್ರೀಡಾ ಚಟುವಟಿಕೆ ಆಯೋಜಿಸಿದ್ದಾಗಲೆಲ್ಲ ಮುಂಚೂಣಿಯಲ್ಲಿ ಇರುತ್ತಿದ್ದವರೇ ಗೋಪಾಲ ಹೆಗಡೆ. ಅವರ ಉತ್ಸಾಹವು ನಮ್ಮಂಥ ಯುವಕರಿಗೆ ಮಾದರಿ ಆಗುವಂಥದು. ಹೆಗಡೆ ಅವರಲ್ಲಿನ ಒಂದು ಗುಣ ಮೆಚ್ಚುವಂಥದು; ಅದು ಅವರ ನೇರ ಮಾತು. ಮನದಲ್ಲಿ ಏನನ್ನು ಮರೆಮಾಡುವುದಿಲ್ಲ. ಅವರ ಈ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗಿರದೆಯೂ ಇರಬಹುದು. ಆದರೆ ಅಂಥದೊಂದು ಗುಣ ಎಲ್ಲರಲ್ಲಿಯೂ ಅಗತ್ಯ. ಒಂದು ಸಂಘಟನೆಯಲ್ಲಿ ಕೆಲಸ ಮಾಡುವಾಗ ಎಲ್ಲರನ್ನೂ ನೇರವಾಗಿ ಎದುರಿಸಿ, ಮಾತನಾಡಿ ದಿಟ್ಟತನ ತೋರುವುದು ಒಳ್ಳೆಯದು.

ಒಂದು ಒಳ್ಳೆಯ ಕೆಲಸ ಆಗಬೇಕು ಎಂದರೆ ಗೋಪಾಲ ಹೆಗಡೆ ಅವರಂತೆ ದಣಿಯದ ಉತ್ಸಾಹದಿಂದ ಹಾಗೂ ದಿಟ್ಟತನದಿಂದ ಕೆಲಸ ಮಾಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ. ಆಗಲೇ ಅನೇಕ ಸವಾಲುಗಳನ್ನು ಮೀರಿ ಒಳಿತಾಗುವ ಕೆಲಸವೊಂದನ್ನು ಮಾಡಲು ಸಾಧ್ಯವಾಗುತ್ತದೆ. ಅಂಥದೊಂದು ಸಾಧ್ಯತೆಯ ಮಾರ್ಗವನ್ನು ತೋರಿಸಿಕೊಟ್ಟವರು ಗೋಪಾಲ ಹೆಗಡೆ.

ತಮ್ಮ ಪ್ರಯೋಜನಕ್ಕೆ ಸ್ವ್ಯಾಬ್ ಅಲ್ಲ; ಸ್ವ್ಯಾಬ್ ಕೆಲಸಕ್ಕಾಗಿ ತಾವು ಎನ್ನುವಂಥ ಗುಣದೊಂದಿಗೆ ತಮ್ಮ ಬೆವರು ಹನಿಗಳ ಅಚ್ಚನ್ನು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಇತಿಹಾಸದ ಪುಟಗಳಲ್ಲಿ ಮೂಡಿಸಿದ್ದಾರೆ ಗೋಪಾಲ ಹೆಗಡೆ. 35ನೇ ವರ್ಷದ ಸಂಭ್ರಮದಲ್ಲಿರುವ "ಸ್ವ್ಯಾಬ್" ಇತಿಹಾಸದಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿದ ಗೋಪಾಲ ಹೆಗಡೆ ಅವರಿಗೆ ಧನ್ಯವಾದಗಳು.

-ಡಿ.ಗರುಡ

ಸ್ವ್ಯಾಬ್ ಸಮಾರಂಭಗಳಲ್ಲಿ ಕ್ರಿಕೆಟಿಗರು...!


ವಿಶ್ವ ಖ್ಯಾತ ಸ್ಪಿನ್ ಬೌಲರ್ ಇ.ಎ.ಎಸ್. ಪ್ರಸನ್ನ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಂಭ್ರಮದಲ್ಲಿ ಯುವ ಕ್ರೀಡಾಪಟು.


ಕ್ರಿಕೆಟ್ ತಂಡದ ನಾಯಕರಾಗಿದ್ದ ಸುಜಿತ್ ಸೋಮಸುಂದರ್ ಅವರಿಗೆ ಒಲಿಂಪಿಕ್ ಹಾಕಿ ಮಾಜಿ ಆಟಗಾರ ಎಂ.ಪಿ.ಗಣೇಶನ್ ಅವರಿಂದ ಪ್ರಶಸ್ತಿ ಪ್ರದಾನ.



ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿರುವ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರಿಂದ ಸ್ವ್ಯಾಬ್ ಆಯೋಜಿಸಿದ ಕ್ರೀಡಾಕೂಟದಲ್ಲಿ ವಿಜೇತರಾದರಿಗೆ ಟ್ರೋಫಿ.


ಹಿರಿಯ ಕ್ರೀಡಾ ಪತ್ರಕರ್ತ ಡೆಡ್ಲಿ ಪೆರೆರಾ ಅವರು ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ. ಚಿತ್ರದಲ್ಲಿ ಗೋಪಾಲ ಕೃಷ್ಣ ಹೆಗಡೆ ಅವರನ್ನೂ ಕಾಣಬಹುದು.


ರೋಜರ್ ಬಿನ್ನಿ ಅವರಿಗೆ ಹಿರಿಯ ಕ್ರೀಡಾ ಪತ್ರಕರ್ತರಾದ ಪಿ.ಆರ್.ವಿಶ್ವನಾಥನ್ ಅವರಿಂದ ನೆನಪಿನ ಕಾಣಿಕೆ.


ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಅವರು ಪ್ರಶಸ್ತಿ ಪ್ರಧಾನ ಮಾಡಿದಾಗಿನ ಕ್ಷಣ.


ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಖ್ಯಾತ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಜಾವಗಲ್ ಶ್ರೀನಾಥ್ ಅವರು ಪಾಲ್ಗೊಂಡು ಪ್ರಶಸ್ತಿ ವಿಜೇತರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಾಗ...!










ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಅನೇಕ ಬಾರಿ ಅಂತರ ಮಾಧ್ಯಮ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುತ್ತಾ ಬಂದಿದೆ. ಮುಂದೆಯೂ ಅಂಥ ಚಟುವಟಿಕೆಗಳನ್ನು ನಡೆಸುವ ಉತ್ಸಾಹವನ್ನೂ ಹೊಂದಿದೆ. ಈ ಹಿಂದೆ ಸ್ವ್ಯಾಬ್ ಆಶ್ರಯದಲ್ಲಿ ನಡೆದಿದ್ದ ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಕೆಲವು ಕ್ಷಣಗಳು ಇಲ್ಲಿವೆ.

"ಸ್ವ್ಯಾಬ್" ಜೊತೆಗೆ ಸದಾ ನಿಂತ ಪೊನ್ನಪ್ಪ






"ಪ್ರಜಾವಾಣಿ"ಯಲ್ಲಿ ಈಗ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಂ.ಎ. ಪೊನ್ನಪ್ಪ ಅವರು ಮೂವತ್ತೈದು ವರ್ಷಗಳ ಕಾಲದಿಂದಲೂ "ಸ್ವ್ಯಾಬ್" ಜೊತೆಗೆ ಇದ್ದು ಇದರ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡು ಬಂದವರು. ಅಷ್ಟೇ ಅಲ್ಲ ಈ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಇದ್ದುಕೊಂಡು ಅನೇಕ ಚಟುವಟಿಕೆಗಳನ್ನು ಆಯೋಜಿಸಿದವರು. ಪೊನ್ನಪ್ಪ ಹಾಗೂ "ಸ್ವ್ಯಾಬ್" ಜೊತೆಗಿನ ನಂಟು ಎಂಥದು ಎನ್ನುವುದಕ್ಕೆ ಇಲ್ಲಿರುವ ಕೆಲವು ಚಿತ್ರಗಳೇ ಸಾಕ್ಷಿ.

ನೆನಪುಗಳ ಬುತ್ತಿ... ಕಪ್ಪು-ಬಿಳುಪಿನಲ್ಲಿ...!



ದಶಕಗಳ ಹಿಂದೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (ಎಡದಿಂದ ಬಲಕ್ಕೆ: ಎಚ್.ಎಸ್. ಸೂರ್ಯನಾರಾಯಣ (ಸೂರಿ), ಪಿ.ಆರ್. ವಿಶ್ವನಾಥ್, ಖ್ಯಾತ ಕ್ರಿಕೆಟ್ ಆಟಗಾರ ಇ.ಎ.ಎಸ್. ಪ್ರಸನ್ನ, ಖ್ಯಾತ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಹಾಗೂ ಗೋಪಾಲಕೃಷ್ಣ ಹೆಗಡೆ ಅವರು ಪಾಲ್ಗೊಂಡ ಅಮೂಲ್ಯವಾದ ಕ್ಷಣಗಳು ಈ ಎರಡು ಚಿತ್ರಗಳಲ್ಲಿ ದಾಖಲಾಗಿವೆ.

ಈ ಎರಡು ಚಿತ್ರಗಳು ಸ್ವ್ಯಾಬ್ ಬೀರುವಿನಲ್ಲಿ ಇದ್ದ ಅತ್ಯಂತ ಹಳೆಯ ಚಿತ್ರಗಳು. ಕಪ್ಪು-ಬಿಳುಪು ಚಿತ್ರಗಳ ಕಾಲದಿಂದ ನಮ್ಮ ಸ್ವ್ಯಾಬ್ ಚಟುವಟಿಕೆ ನಡೆಸಿಕೊಂಡು ಬಂದಿದೆ ಎನ್ನುವುದಕ್ಕೆ ಸಾಕ್ಷಿ. ಮಹತ್ವದ ಇತಿಹಾಸವನ್ನು ಈ ಚಿತ್ರಗಳು ನಮ್ಮ ಮುಂದೆ ಇಟ್ಟಿವೆ.